ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕರಾವಳಿ ಪ್ರದೇಶಗಳಲ್ಲಿ ರೆಮಲ್ ಚಂಡಮಾರುತದ (Cyclone Remal) ಎಫೆಕ್ಟ್ ಜೋರಾಗಿದ್ದು, ಅಪ್ಪಳಿಸಿದ ಸೈಕ್ಲೋನ್ಗೆ ಅಲ್ಲಲ್ಲಿ ಭೂಕುಸಿತ (Landslide) ಉಂಟಾಗಿದೆ.
ಗಂಟೆಗೆ 135 ಕಿ.ಮೀ ಸಮುದ್ರದಲ್ಲಿ ಚಂಡಮಾರುತದ ಗರಿಷ್ಠ ವೇಗ ಇದ್ದು, ಇದರ ಪರಿಣಾಮದಿಂದಾಗಿ ರಿಣಾಮದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಸೈಕ್ಲೋನಿಕ್ ಚಂಡಮಾರುತವು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ ತಕ್ಷಣ, ಬಿರ್ಭುಮ್, ನಾಡಿಯಾ, ಪೂರ್ವ ಬರ್ಧಮಾನ್, ಬಂಕುರಾ, ಪೂರ್ವ ಮೇದಿನಿಪುರ, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು, ಕೋಲ್ಕತ್ತಾ, ಬಿಧಾನನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಪ್ರಾರಂಭವಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ರಸ್ತೆ ಅಪಘಾತಗಳು, ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

ಸದ್ಯ ಪಶ್ಚಿಮ ಬಂಗಾಳದಲ ವಿವಿಧ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಮತ್ತು ಗಾಳಿಯಿಂದಾಗಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಲವೆಡೆ ಜೋರು ಗಾಳಿಗೆ ಮರಗಳು ಧರೆಗುರುಳಿದ್ದು, ಎಲ್ಲೆಂದರಲ್ಲಿ ಬಿದ್ದಿವೆ. ಇದನ್ನೂ ಓದಿ: ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿದ ಮೈದುನನ್ನ ಹತ್ಯೆ
ಈ ಹಿನ್ನೆಲೆಯಲ್ಲಿ ರೈಲು, ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಹದಗೆಡುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ರಸ್ತೆ ಅಪಘಾತಗಳು, ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ
ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಏಜೆನ್ಸಿಗಳಿಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಬಂಗಾಳದ ಗವರ್ನರ್ ಸಿವಿ ಆನಂದ್ ಬೋಸ್ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: 2 ವರ್ಷದ ಮಗು ಆಟವಾಡುತ್ತಾ ಸಂಪ್ಗೆ ಬಿದ್ದು ದುರ್ಮರಣ