ಬೆಂಗಳೂರು: ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ಇಂದು ಮೆಡಿಕಲ್ ಟೆಸ್ಟ್ (Medical Test) ನಡೆಸಲಾಯಿತು.
ಎಸ್‍ಐಟಿ ಅಧಿಕಾರಿಗಳು ಅಂಬುಲೆನ್ಸ್ ನಲ್ಲಿ ಮೆಡಿಕಲ್ ಟೆಸ್ಟ್ ಗೆ (Medical Test) ಕರೆದೊಯ್ದರು. ಪ್ರಜ್ವಲ್ ರೇವಣ್ಣ ಅವರಿಗೆ ಜನರಲ್ ಚೆಕಪ್ ಜೊತೆಗೆ ವಿಶೇಷ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಯಿತು. ಇದನ್ನೂ ಓದಿ: ನಾವು 15 ರಿಂದ 20 ಸ್ಥಾನ ಗೆದ್ದೇ ಗೆಲ್ತೇವೆ- ಸಿದ್ದರಾಮಯ್ಯ
ಕೋರ್ಟಿಗೆ ಸಬ್ಮಿಟ್ ಮಾಡಲು ಮೂರ್ನಾಲ್ಕು ರೀತಿಯ ಟೆಸ್ಟ್ ಗಳಿಗೆ ಪೊಲೀಸರು ರಿಕ್ವೆಸ್ಟ್ ಮಾಡಿದ್ದರು. ಪೊಲೀಸರು ರಿಕ್ವೆಸ್ಟ್ ಕೊಟ್ಟಿರುವ ಟೆಸ್ಟ್ ಗಳನ್ನು ವೈದ್ಯರು ಮಾಡಿದ್ದಾರೆ. ಮೆಡಿಕಲ್ ಕಾಲೇಜಿನ ಡೀನ್, ಸೂಪರಿಂಡೆಂಟ್ ಸಮ್ಮುಖದಲ್ಲಿ ಈ ಟೆಸ್ಟ್ ನಡೆಸಲಾಯಿತು. ಇದನ್ನೂ ಓದಿ: ಗೃಹ ಪ್ರವೇಶದಲ್ಲಿ ಊಟ ಸೇವಿಸಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನ ಅಸ್ವಸ್ಥ
ಇದೇ ವೇಳೆ ಅತ್ಯಾಚಾರಕ್ಕೆ ಸಂಬಂಧಿಸಿದ ಟೆಸ್ಟ್ ಬಗ್ಗೆಯೂ ಪೊಲೀಸರು ಮನವಿ ಮಾಡಿಕೊಂಡರು. ಹೀಗಾಗಿ ಪೊಲೀಸರ ಮನವಿ ಮೇರೆಗೆ ವೈದ್ಯರು ಕೆಲವು ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಸ್ಥಳ ಮಹಜರಿಗೂ ಮುನ್ನ ವಿವಿಧ ಟೆಸ್ಟ್ ಗಳನ್ನ ಮಾಡಿ ಸಾಕ್ಷ್ಯ ಸಂಗ್ರಹಿಸಲು ಎಸ್‍ಐಟಿ ಮುಂದಾಗಿದೆ. ಇದನ್ನೂ ಓದಿ: ಜೆಡಿಎಸ್ ಎಂಎಲ್‌ಸಿ ಟಿಕೆಟ್ ಜವರಾಯಿಗೌಡರಿಗೆ

