ಬೆಂಗಳೂರು: ಸಿಎಂ ಸಿದ್ದರಾಮಯ್ಯ, (Siddaramamiah) ಡಿಸಿಎಂ ಡಿಕೆ. ಶಿವಕುಮಾರ್ (DK̤Shivakumar) ರನ್ನ ಇಂದು 5 ಕ್ಕೆ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಭೇಟಿ ಮಾಡಲಿದ್ದಾರೆ.
ಲೋಕಸಭೆ ಚುನಾವಣೆಯ (Lokasabha Election) ಬಳಿಕ ಶಾಸಕರ ನಿಯೋಗ ಭೇಟಿ ಮಾಡುತ್ತಿದೆ. ಇನ್ನು ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಸೆಂಟ್ರಲ್ ಜೈಲ್ ನಲ್ಲಿ ಗ್ಯಾಂಗ್ ವಾರ್- ಸಿನಿಮಾ ಶೈಲಿಯಲ್ಲಿ ನಡಿತ್ತು ಗುಂಪುಗಳ ನಡುವೆ ಅಟ್ಯಾಕ್
ಸೋಲಿನ ಪರಾಮರ್ಶೆ, ಶಾಸಕರಿಂದ ಮಾಹಿತಿ ಸಂಗ್ರಹಕ್ಕೆ ಸಿಎಂ ಡಿಸಿಎಂ ಮುಂದಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆ ಬಗ್ಗೆಯು ಚರ್ಚೆ ಮಾಡಲಿದ್ದಾರೆ.
ಜೊತೆಗೆ ಸಭೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದು ಮೋದಿ 3.O ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ

