ರಾಮನಗರ: ಇಂದು ಕನಕಪುರದಲ್ಲಿ (Kankapura) ಕೈ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮಾಜಿ ಸಂಸದ ಡಿಕೆ ಸುರೇಶ್ (DKSuresh) ಭಾವುಕರಾಗಿದ್ದಾರೆ.
ಇಂದು ಅವರು ರಾಮನರದಲ್ಲಿ ಕೈ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ಬಿಜೆಪಿ ಜೆಡಿಎಸ್ ಗೆಲುವಲ್ಲ, ನನ್ನ ಮೇಲಿನ ಆಕ್ರೋಶದ ಗೆಲುವಾಗಿದೆ. ನಾನು ಈ ಗೆಲುವನ್ನು ಸ್ವೀಕಾರ ಮಾಡುತ್ತೇನೆ ಎಂದು ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟ – ಮಳೆ ರಾಯನ ಆರ್ಭಟಕ್ಕೆ ಜನ ತತ್ತರ….!
ನಾನು ಮಾಡಿದ ಕೆಲಸಗಳು ಇನ್ನೂ ಐದು ವರ್ಷ ನಡೆಯುತ್ತವೆ. ಅದೇನೋ ರಸ್ತೆ ಮಾಡಿಸ್ತೀನಿ ಅಂದಿದ್ದಾರಂತೆ ಮಾಡಿಸಲಿ, ನಾನೂ ಸಹಕಾರ ಕೊಡ್ತೇನೆ. ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಿದ್ದೀನಿ ಅಂತ ಸುಮ್ಮನೆ ಕೂರಲ್ಲ. ಈ ಕ್ಷೇತ್ರದ ಅಭಿವೃದ್ಧಿ ಗೆ ಕೆಲಸ ಮಾಡ್ತೆನೆ ಎಂದು ಭಾವುಕರಾಗಿದ್ದಾರೆ.ಇದನ್ನೂ ಓದಿ: ಚುರುಕುಗೊಂಡ ಮುಂಗಾರು- ರಾಜ್ಯದ ಹಲವೆಡೆ ರೆಡ್, ಆರೆಂಜ್ ಅಲರ್ಟ್ ಘೋಷಣೆ..!
ಸರ್ಕಾರ ಇದೆ, ಸಿದ್ರಾಮಯ್ಯ ಹಾಗೂ ಡಿಕೆ. ಶಿವಕುಮಾರ್ ನೇತೃತ್ವದಲ್ಲಿ ನಾನು ಕೊಟ್ಟ ಮಾತು ನೆರವೇರಿಸುತ್ತೇನೆ. ನನ್ನ ಸೋಲು ಇದೊಂದು ದುರ್ಘಟನೆ. ಒಬ್ಬ ಸಾಮನ್ಯ ಪ್ರಜೆಯಾಗಿ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಬೆಂಗಳೂರು ಗ್ರಾಮಂತರ ಕ್ಷೇತ್ರದಲ್ಲಿ ಡಿಕೆ. ಸುರೇಶಗೆ ಹಿನ್ನಾಯ ಸೋಲಾಗಿತ್ತು. ಇದನ್ನೂ ಓದಿ: ರಾಹುಲ್, ಖರ್ಗೆ ಭೇಟಿ ಮಾಡಿ ಬೆಂಗಳೂರಿಗೆ ಡಿಕೆಶಿ ವಾಪಸ್

