ಬೀದರ್: ತಡರಾತ್ರಿ ಧಾರಾಕಾರ ಮಳೆಗೆ (Rain) ಸಣ್ಣ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಅಟ್ಟೂರು ಗ್ರಾಮದ ಬಳಿ ನಡೆದಿದೆ.
ಧಾರಕಾರವಾಗಿ ಸುರಿದ ಮಳೆಗೆ ಗ್ರಾಮದ ಸಣ್ಣ ಕೆರೆ ಭರ್ತಿಯಾಗಿ ಒಡೆದ ಪರಿಣಾಮ ಕೆರೆಯಲ್ಲಿದ್ದ ನೀರು ಖಾಲಿಯಾಗಿದೆ. ಈಗ ಕೆರೆಯ ಕೆಳಗಿದ್ದ ಜಮೀನುಗಳಿಗೆ ನೀರು ನುಗ್ಗಿ ಸುಮಾರು 20% ರಷ್ಟು ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ದರ್ಶನ್ ಅನ್‍ಫಾಲೋ, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ!
ಮಳೆಗೆ ಗ್ರಾಮದ ಹಲವು ರೈತರ ಜಮೀನಿನಲ್ಲಿದ್ದ ಬಾವಿಗಳು ತುಂಬಿದ್ದು ಕೆರೆ ನೀರಿನ ರಭಸಕ್ಕೆ ಅಟ್ಟೂರು ಹಾಗೂ ಅಟ್ಟೂರು ತಾಂಡಾದ ಮಧ್ಯೆ ಇರುವ ರಸ್ತೆ ಸೇತುವೆ ಕೊಚ್ಚಿ ಹೋಗಿದೆ. ಕೋಹಿನೂರು ಹೊಬಳಿಯಲ್ಲೇ ತಡರಾತ್ರಿ 180 ಮಿಲಿ ಮೀಟರ್ ಮಳೆಯಾಗಿದೆ. ಇದನ್ನೂ ಓದಿ: ಜೂನ್ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

