ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲೂ ಪಾಲಾಗಿರುವ ನಟ ದರ್ಶನ್(Darshan) & ಗ್ಯಾಂಗ್ ಪ್ರಕರಣದ ಬಗ್ಗೆ ಬಹುಭಾಷಾ ನಟ ಸಾಯಿಕುಮಾರ್ (Darshan) ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಶೂಟಿಂಗ್ ನಲ್ಲಿ ಇದ್ದೆ. ಅಂದು ಕೂಡಲೇ ಕನ್ನಡ ನ್ಯೂಸ್ ಚಾನೆಲ್ ಹಾಕಲು ಹೇಳಿದ್ರು. ನನಗೆ ಟೆನ್ಷನ್ ಆಯ್ತು. ನನ್ನ ಬಗ್ಗೆ ಏನಾದ್ರೂ ನೆಗೆಟಿವ್ ಬರ್ತಿದೆಯಾ ಅನಿಸಿತು. ಇದನ್ನೂ ಓದಿ: ದುನಿಯಾ ವಿಜಯ ಡಿವೊರ್ಸ್: ವಿಚ್ಛೇದನಾ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಆನಂತ್ರ ಗೊತ್ತಾಯ್ತು ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ಬಳಿ ದರ್ಶನ್ ನ ಪೊಲೀಸರು ವಶಕ್ಕೆ ಪಡೆದರು ಅಂತ. ನಾನು ಅವರೊಟ್ಟಿಗೆ ಭಗವಾನ್ & ಬೃಂದಾವನ ಸಿನಿಮಾಗಳನ್ನ ಮಾಡಿದ್ದೇನೆ. ಇದನ್ನೂ ಓದಿ: ಸಿಹಿಸುದ್ದಿ ಕೊಟ್ಟ ನಟಿ ಹರ್ಷಿಕಾ ದಂಪತಿ – ನೆಟ್ಟಿಗರ ಗಮನ ಸೆಳೆದ ವಿಭಿನ್ನ ಫೋಟೋಶೂಟ್
ಆಂಧ್ರದಲ್ಲಿ ಎಲ್ಲೇ ಹೋದರೂ ಸಹ ದರ್ಶನ್ ಪ್ರಕರಣ ಏನು ಅಂತ ನನ್ನನ್ನೇ ಕೇಳ್ತಾರೆ. ಆ ರೀತಿ ಆಗಬಾರದಿತ್ತು ಆಗಿದೆ. ತುಂಬಾ ಬೇಜಾರು ಆಗ್ತಿದೆ. ಖಂಡಿತಾ ಇದರಲ್ಲಿ ಏನೋ ಇದೆ.. ಏನು ಅಂತ ಗೊತ್ತಾಗ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಏನೂ ಮಾತನಾಡೋಕೆ ಆಗೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಶಿವಣ್ಣ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್