ಚಂಡೀಗಢ: ಬಸ್ ಪಲ್ಟಿಯಾಗಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸುಮಾರು 40ಕ್ಕೂ ಹೆಚ್ಚು ಶಾಲಾ ಮಕ್ಕಳು (School Children) ಗಾಯಗೊಂಡಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ (Panchakula Haryana) ನಡೆದಿದೆ.
ಪಂಚಕುಲದ ಪಿಂಜೋರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: 15 ದಿನಗಳ ಮಗಳನೇ ಜೀವಂತ ಸಮಾಧಿ ಮಾಡಿದ ತಂದೆ!
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಪಿಂಜೋರ್ ಆಸ್ಪತ್ರೆಗೆ ಮತ್ತು ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಕುಡಿಯೋಕೆ ನೀರು ಕೊಡ್ತಿಲ್ಲ.. ವಿಷನಾದ್ರೂ ಕೊಡಿ ಎಂದು ಆಕ್ರೋಶ
ಸದ್ಯ ಅಪಘಾತಕ್ಕೆ ಬಸ್ ಚಾಲಕನ ಅತಿ ವೇಗವೇ ಕಾರಣ ಎನ್ನಲಾಗಿದೆ. ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಅಂದರೆ ಓವರ್‌ಲೋಡ್ ಮತ್ತು ರಸ್ತೆಯ ಕಳಪೆ ಸ್ಥಿತಿ ಕೂಡ ಅಪಘಾತಕ್ಕೆ ಹೆಚ್ಚುವರಿ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಈ ಪರಿಸ್ಥಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಹಳೆ ವೈಷಮ್ಯಕ್ಕೆ ಗ್ರಾಮ ಪಂಚಾಯತಿ ಸದಸ್ಯನ ಕೊಲೆ

