ಬೆಂಗಳೂರು: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಕಮದಾಳು ಗ್ರಾಮದಲ್ಲಿ ಚಿರತೆಯನ್ನು (Leopard) ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಸಂಪೂರ್ಣ ವರದಿ ನೀಡುವಂತೆ ಸಚಿವ ಈಶ್ವರ್ ಖಂಡ್ರೆ (Ehswar Kahandre) ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ಸಾರ್ವಜನಿಕರು ಅರಣ್ಯ ಸಿಬ್ಬಂದಿ ಸಮ್ಮುಖದಲ್ಲೇ ಚಿರತೆ (Cheetah) ಕೊಂದಿದ್ದಾರೆ. ಸಾರ್ವಜನಿಕರಿಗೆ ತೊಂದರೆಯುಂಟು ಚಿರತೆಯನ್ನು ಸೆರೆಹಿಡಿಯಲು ಹಾಗೂ ಚಿರತೆಯ ಹತ್ಯೆ ತಡೆಯಲು ವಿಫಲವಾದ ಕುರಿತು ಶೀಘ್ರವಾಗಿ ಇಲಾಖೆ ವತಿಯಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ.
ಈ ಮೂಲಕ ಚಿರತೆ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನ ಬಾವಿಗೆ ಎಸೆದ ಅಪ್ರಾಪ್ತೆ
ಏನಿದು ಪ್ರಕರಣ:
ಭಾನುವಾರ (07) ಬೆಳಗ್ಗೆ 9.30 ದೇವದುರ್ಗ ತಾಲೂಕು ಕಮಾದಳ್ ಗ್ರಾಮದಲ್ಲಿ ಓರ್ವ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ವಿಚಾರ ತಿಳಿದು ರಣ್ಯ ಇಲಾಖೆ ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಠಾಣದ ಪಕ್ಕದ ಕಲ್ಲು ಬಂಡೆ ಇರುವ ಗುಡ್ಡದಲ್ಲಿ ಚಿರತೆ ಇರುವ ಬಗ್ಗೆ ಖಾತರಿ ಪಡಿಸಿಕೊಂಡಿದ್ದರು.
ಇನ್ನೂ ವಿಚಾರ ತಿಳಿದ ಸುತ್ತಮುತ್ತಲಿನ ಗ್ರಾಮದ ಜನರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಚಿರತೆ ಮೂರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಪೋಲೀಸರು ಬಂದಿದ್ದರು.
ಸಿ.ಪಿ.ಐ ಮತ್ತು ಕಂದಾಯ ಇಲಾಖೆಯ ತಹಸಿಲ್ದಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತ್ತೊಮ್ಮೆ ಚಿರತೆಯ ಓಡಾಟ ಕಂಡುಬಂದಿತ್ತು. ಈ ವೇಳೆ ಮಾನ್ವಿ ವಲಯದ ಸಿಬ್ಬಂದಿಗಳನ್ನೂ ಕರೆಯಿಸಲಾಗಿತ್ತು. ಅಷ್ಟು ಹೊತ್ತಿಗೆ ವಿಷಯ ತಿಳಿದು ಸಾವಿರಾರು ಜನರು ಗುಡ್ಡದ ಸುತ್ತಾ ಜಮಾಯಿಸಿದ್ದರು. ಮಾನ್ವಿ ವಲಯದಲ್ಲಿ ಲಭ್ಯವಿದ್ದ ಬೊನ್ ಅನ್ನು ಚಿರತೆ ಸೆರೆಹಿಡಿಯಲು ತರಿಸಿ ಸ್ಥಳದಲ್ಲಿ ಅಳವಡಿಸಲಾಗಿತ್ತು ಮತ್ತು ಬಲೆಯನ್ನೂ ಅಳವಡಿಸಲಾಗಿತ್ತು. ನಂತರ ದೇವದುರ್ಗ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣದ ಎಲ್ಲ ಬೆಳವಣಿಗೆಗಳ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪಡೆದಿದ್ದರು. ಅರವಳಿಕೆ ತಜ್ಞರ ತಂಡಕ್ಕೂ ಮಾಹಿತಿ ನೀಡಲಾಗಿತ್ತು.
ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸಪಡುತ್ತಿದ್ದರು. ಕೊನೆಗೆ ಸಾಯಂಕಾಲದ ಹೊತ್ತಿಗೆ ಉದ್ವೇಗಗೊಂಡ ಜನರು ಚಿರತೆ ಇರುವ ಸ್ಥಳಕ್ಕೆ ಜನರು ನುಗ್ಗಿ ಅದನ್ನು ಕೋಲು ಮತ್ತು ಆಯುಧದಿಂದ ಹೊಡೆದು ಕೊಂದುಹಾಕಿದ್ದರು. ಇದನ್ನೂ ಓದಿ: ಹರಿಯಾಣದಲ್ಲಿ ಬಸ್ ಪಲ್ಟಿ- 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

