ಇತ್ತೀಚೆಗೆ ಹಾವೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Haveri Accident Case) ಶಿವಮೊಗ್ಗ ಜಿಲ್ಲೆಯ ಎಮ್ಮಿಹಟ್ಟಿ ಗ್ರಾಮದ 13 ಜನರು ಮೃತಪಟ್ಟಿದ್ದರು. ಈಗ ಮೃತರ ಕುಟುಂಬಸ್ಥರ ಎಮ್ಮಿಹಟ್ಟಿ ಗ್ರಾಮಕ್ಕೆ ಶಿವರಾಜ್‌ಕುಮಾರ್ (Shivarajkumar) ದಂಪತಿ ಭೇಟಿ ನೀಡಿ ಸಾಂತ್ವಾನ ಹೇಳಿ ಹಣ ಸಹಾಯ ಮಾಡಿದ್ದಾರೆ.
ರಸ್ತೆ ಅಪಘಾತದಲ್ಲಿ ಇತ್ತೀಚೆಗೆ 13 ಮಂದಿ ಹಾವೇರಿ ಬಳಿ ಮೃತಪಟ್ಟಿದ್ದರು. ಅದರಲ್ಲಿ ಒಂದೇ ಕುಟುಂಬದ 4 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರು ಸಂಕಷ್ಟದಲ್ಲಿದ್ದು, ಈಗ ಎಮ್ಮಿಹಟ್ಟಿಗೆ ಗೀತಾ (Geetha) ಮತ್ತು ನಟ ಶಿವರಾಜ್‌ಕುಮಾರ್ ದಂಪತಿ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಯಾಗಿ 1 ತಿಂಗಳು- 45 ದಿನಗಳ ಒಳಗೆ ಚಾರ್ಜ್‍ಶೀಟ್ ಸಲ್ಲಿಸಲು ತಯಾರಿ
ನಿಮ್ಮ ಜೊತೆ ನಾವಿದ್ದೇವೆ ಎಂದು ಸಾಂತ್ವಾನ ಹೇಳಿದ್ದಾರೆ. ಅದಷ್ಟೇ ಅಲ್ಲ, ಅವರ ಕಷ್ಟಕ್ಕೆ ಶಿವಣ್ಣ ಜೋಡಿ ಹಣ ಸಹಾಯ ಮಾಡುವ ಮೂಲಕ ನೆರವಾಗಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ಕಾನೂನು ತಂಡದೊಂದಿಗೆ ಚರ್ಚಿಸಲು ಸಮಯ ನೀಡುವಂತೆ ಕೇಜ್ರಿವಾಲ್ ಮನವಿ
ಇದೀಗ ಮೃತರ ಕುಟುಂಬಸ್ಥರಿಗೆ ನೆರವಾಗಿದ್ದಕ್ಕೆ ಶಿವಣ್ಣ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ

