ಡೆಹ್ರಾಡೂನ್: ಕೇದಾರನಾಥದ ಬಿಜೆಪಿ (BJP) ಶಾಸಕಿ ಶೈಲಾ ರಾಣಿ ರಾವತ್ (Shaila Rani Rawat) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕಿ ಶೈಲಾ ಅವರು (68) ಅವರು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ (Dehradun Max Hospital) ನಿಧನರಾಗಿರುವುದಾಗಿ ಕುಟುಂಬದವರು ದೃಢಪಡಿಸಿದ್ದಾರೆ.
68 ವರ್ಷದ ಶೈಲಾ ಅವರು ಬೆನ್ನುಮೂಳೆ ಗಾಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾವತ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಮಾಜಿ ಸಚಿವ ನಾಗೇಂದ್ರ ವಶಕ್ಕೆ
2012ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದಿದ್ದ ರಾವತ್ ಕೇದಾರನಾಥ ಕ್ಷೇತ್ರದಲ್ಲಿ ಮೊದಲಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಇವರೊಂದಿಗೆ ಇನ್ನೂ ಅನೇಕ ಕಾಂಗ್ರೆಸ್ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದರು.
2017ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಸೋತಿದ್ದ ರಾವತ್, 2022ರಲ್ಲಿ ಮತ್ತೆ ಬಿಜೆಪಿಯಿಂದಲೇ ಕೇದಾರನಾಥದಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಬಿಎಂಡಬ್ಲ್ಯೂ ಹಿಟ್ ಆ್ಯಂಡ್ ರನ್ ಪ್ರಕರಣ- ರಾಜಕಾರಣಿ ಪುತ್ರ ಬಂಧನ

