ನವದೆಹಲಿ: ಆಮ್ ಆದ್ಮಿ ಪಕ್ಷದ (Aam Aadmi Party) ಮಾಜಿ ಸಚಿವ ರಾಜ್ ಕುಮಾರ್ ಆನಂದ್(RaajKumar Anand) ಬುಧವಾರ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಗೊಂಡರು.
ರಾಜ್‌ಕುಮಾರ್ ಅವರು ಇದೇ ವರ್ಷ ಏಪ್ರಿಲ್‌ನಲ್ಲಿ ಎಎಪಿಗೆ (AAP) ರಾಜೀನಾಮೆ ನೀಡಿ ಬಿಎಸ್‌ಪಿ (BSP) ಸೇರ್ಪಡೆಯಾಗಿದ್ದರು. ಆದರೆ ಲೋಕಸಭೆ ಚುನಾವಣೆಗೂ ಮುನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ . ಕೇಂದ್ರ ಏಜೆನ್ಸಿಗಳ ಭಯದಿಂದ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ಇದನ್ನೂ ಓದಿ: ಮನೆ ಉಟಕ್ಕೆ ಅವಕಾಶ ನೀಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದುಡಿಕೆ- ಜುಲೈ 18ರವರೆಗೆ ದರ್ಶನ್ಗೆ ಜೈಲೂಟವೇ ಗತಿ
ರಾಜ್‌ಕುಮಾರ್ ಅವರು ತಮ್ಮ ರಾಜೀನಾಮೆಯನ್ನು ನೆರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Aravind Kerjiwal) ಅವರ ನಿವಾಸಕ್ಕೆ ಏಪ್ರಿಲ್ 12 ರಂದು ಕಳುಹಿಸಿದ್ದರು. ಜೂನ್ 14 ರಂದು, ಪಟೇಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜ್‌ಕುಮಾರ್ ಅವರನ್ನು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಅನರ್ಹಗೊಳಿಸಿದ್ದರು. ಇದನ್ನೂ ಓದಿ: ಹಾಸ್ಟೆಲ್ನಲ್ಲಿ ತಯಾರಿಸಿದ್ದ ಊಟದಲ್ಲಿ ಹಲ್ಲಿ ಪತ್ತೆ – 35 ವಿದ್ಯಾರ್ಥಿಗಳು ಅಸ್ವಸ್ಥ
ಈ ಬಾರಿ ರಾಜ್‌ಕುಮಾರ್ ಆನಂದ್ ಕೂಡ ಬಿಎಸ್‌ಪಿ ಟಿಕೆಟ್‌ನಲ್ಲಿ ನವದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಗಳಿಸಿದ್ದು ಕೇವಲ 5629 ಮತಗಳು. ಈ ಕ್ಷೇತ್ರದಲ್ಲಿ ಬಿಜೆಪಿಯ ಬಾನ್ಸುರಿ ಸ್ವರಾಜ್ 78370 ಮತಗಳಿಂದ ಗೆದ್ದಿದ್ದಾರೆ. ಅವರು 453185 ಮತಗಳನ್ನು ಪಡೆದರು. ಆಮ್ ಆದ್ಮಿ ಪಕ್ಷದ ಸೋಮನಾಥ್ ಭಾರ್ತಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 374815 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: BMW ಹಿಟ್ ಆಂಡ್ ರನ್ ಪ್ರಕರಣ: ಶಿವಸೇನಾ ಉಪ ನಾಯಕ ಸ್ಥಾನದಿಂದ ರಾಜೇಶ್ ಶಾ ವಜಾ

