By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಈ ವಾರ ತೆರೆ ಮೇಲೆ ಬರುತ್ತಿದೆ ಹೆಜ್ಜಾರು ಚಿತ್ರ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - ಈ ವಾರ ತೆರೆ ಮೇಲೆ ಬರುತ್ತಿದೆ ಹೆಜ್ಜಾರು ಚಿತ್ರ

Entertainmentಸ್ಯಾಂಡಲ್​ವುಡ್-Sandalwood

ಈ ವಾರ ತೆರೆ ಮೇಲೆ ಬರುತ್ತಿದೆ ಹೆಜ್ಜಾರು ಚಿತ್ರ

Published July 17, 2024
Share
4 Min Read
Hejjaru
SHARE

ಬೆಳ್ಳಿ ಪರದೆಯ ಮೇಲೆ ವಿಭಿನ್ನ ಶೈಲಿಯ ವಿನೂತನ ಕತೆಯನ್ನು ನೋಡಬಯಸುವವರಿಗಾಗಿ ಒಂದು ಪ್ರೇಮಕಥೆಯ ಮೂಲಕ ಇದೇ 19ರಂದು ರಾಜ್ಯದ್ಯಂತ “ಹೆಜ್ಜಾರು” ಚಿತ್ರವನ್ನು ಬಿಡುಗಡೆ ಮಾಡುತಿದ್ದೇವೆ ಎಂದು ಹೇಳಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು. ಹಾಗೆಯೇ ಚಿತ್ರದ ಟ್ರೈಲರ್ ಅನ್ನು ಕೂಡ ಪ್ರದರ್ಶಿಸಲಾಯಿತು.

ನಿರ್ದೇಶಕ ಹರ್ಷಪ್ರಿಯ ಮಾತನಾಡುತ್ತಾ ನಾನು ಮೂಲತಃ ಭದ್ರಾವತಿಯವನು , ನನ್ನ ವೃತ್ತಿ ಪೈಂಟರ್ ಕೆಲಸ , ನನಗೆ ಸಿನಿಮಾ ಬಗ್ಗೆ ಅಪಾರ ಪ್ರೀತಿ , ಆಸಕ್ತಿ ಇತ್ತು ಆದರೆ ಅವಕಾಶ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ನಮ್ಮ ನಟ , ನಿರ್ದೇಶಕ ನವೀನ್ ಕೃಷ್ಣ ರ ಧಿಮಾಕು ಚಿತ್ರದ ಮೂಲಕ. ಬರಹಗಾರ , ಚಿತ್ರ ಸಾಹಿತಿಯಾಗಿ ನನ್ನ ಕೆಲಸವನ್ನು ಮೆಚ್ಚಿ ತುಂಬಾ ಸಪೋರ್ಟ್ ಮಾಡಿದರು. ಶ್ರೀನಿವಾಸ್ ಮೂರ್ತಿ ಸರ್ ರಾಜು ಆಗಿದ್ದ ನನಗೆ ಹರ್ಷಪ್ರಿಯ ಎಂದು ಹೆಸರು ಕೊಟ್ಟರು.

ನಂತರ ರವಿ ಗರಣಿ ಗುರುಗಳ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ಕೆಲಸ ಮಾಡುತ್ತಾ ರೈಟರ್ , ಡೈರೆಕ್ಟರ್ ಆಗಿ ಮುಂದುವರಿಯುತ್ತಾ ಝೀ ವಾಹಿಯ ಫಿಕ್ಷನ್ ಹೆಡ್ ಆಗಿ ಜವಾಬ್ದಾರಿ ವಹಿಸಿಕೊಂಡೆ. ಅಲ್ಲಿಂದ ನಾನು ಹಿಂತಿರುಗಿ ನೋಡಲೇ ಇಲ್ಲ. ನಾನು ಕೂಡ ಒಂದು ಚಿತ್ರ ನಿರ್ದೇಶನ ಮಾಡಬೇಕೆಂದು ಕತೆಯನ್ನು ಬರೆದು ಒಂದಷ್ಟು ಹಣದೊಂದಿಗೆ ಚಿತ್ರೀಕರಣ ಆರಂಭಿಸಿದೆ, ಆದರೆ ಒಂದಷ್ಟು ಸಮಸ್ಯೆ ಎದುರಾಯಿತು. ಆಗ ನನಗೆ ಬೆನ್ನೆಲುಬಾಗಿ ನಿಂತಿದ್ದೆ ರಾಮ್ ಜಿ. ನನ್ನ ಅವರ ಒಡನಾಟ ಸೀರಿಯಲ್ ಸಂದರ್ಭದಲ್ಲಿ ಚೆನ್ನಾಗಿತ್ತು. ಒಮ್ಮೆ ಕರೆದು ನನಗೂ ಕಥೆ ಹೇಳಲ್ವಾ ಅಂದಿದ್ರು, ಅವರ ಮನಸ್ಥಿತಿ ನನಗೆ ಅರ್ಥವಾಯಿತು. ಅಲ್ಲಿಂದ ಶುರುವಾದ ಚಿತ್ರ ಇಂದು ಬಿಡುಗಡೆ ಹಂತಕ್ಕೆ ಬಂದಿದೆ.

ಇನ್ನು ಚಿತ್ರದ ವಿಚಾರ ಹೇಳೋದಾದ್ರೆ ಕನ್ನಡದ ಮೊಟ್ಟ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಎನ್ನಬಹುದು. ಒಬ್ಬರ ಜೀವನದಲ್ಲಿ ನಡೆದಿದ್ದು , ಇನ್ನೊಬ್ಬರ ಜೀವನದಲ್ಲಿ ನಡೆಯುವಂತ ಕಥೆ ಇದು. ಇದನ್ನ ಕಾಲ್ಪನಿಕವಾಗಿ ಸೃಷ್ಟಿಸಿ 1965 ರಲ್ಲಿ ನಡೆದ ಘಟನೆಗೂ 1995 ರಲ್ಲಿ ನಡೆಯುವ ಘಟನೆಗೂ ಸಾಮ್ಯತೆ ತೋರುವಂತೆ ಕಥಾಂದರವಿದ್ದು, ಪ್ರೀತಿ , ಎಮೋಷನ್, ಸಾಂಗ್, ಫೈಟ್ ಎಲ್ಲವೂ ಇದ್ದು ಕಾಮಿಡಿ ಇಲ್ಲದೆ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಉಜಿರೆ , ಮಾಡ್ನಿತ್ಯರ್ , ಬೆಳ್ತಂಗಡಿ ಸುತ್ತಮುತ್ತ ಚಿತ್ರೀಕರಣ ಮಾಡಿದ್ದು , ಮಳೆ ಈ ಚಿತ್ರಕ್ಕೆ ಬೇಕಿತ್ತು. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು , ಒಂದು ಹಾಡು 25 ಲಕ್ಷ ಖರ್ಚು ಮಾಡಿ ಅದನ್ನು ಚಿತ್ರದಲ್ಲಿ ತೋರಿಸಿದೆ ಪ್ರಮೋಷನ್ ಗಾಗಿ ಬಳಸಿಕೊಳ್ಳುತ್ತಿದ್ದೇವೆ. ಚಿತ್ರಕ್ಕೆ ಅಗತ್ಯ ಇರುವಷ್ಟು ಮಾತ್ರ ಬಳಸಿಕೊಳ್ಳುವ ನಿರ್ಧಾರ ನನ್ನದು ಹಾಗೂ ನನ್ನ ನಿರ್ಮಾಪಕರದ್ದು, ಇದು ನನ್ನ ಮೊದಲ ಪ್ರಯತ್ನ ಎಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ ಎಂದರು.

ಈ ಚಿತ್ರದ ನಿರ್ಮಾಪಕ ಕೆ . ಎಸ್. ರಾಮ್ ಜಿ ಮಾತನಾಡುತ್ತಾ ನಿರ್ದೇಶಕ ಹರಿಪ್ರಿಯ ಬಹಳ ಬುದ್ಧಿವಂತ, ಶ್ರಮಜೀವಿ , ಯಾರಿಗೂ ಕಿಂಚಿತ್ತು ಮನಸ್ಸು ನೋಯಿಸಿದಂತ ವ್ಯಕ್ತಿ. ಆತನಿಗೆ ಯಶಸ್ಸು ಸಿಗಬೇಕು ಒಳ್ಳೆಯದಾಗಬೇಕೆಂಬ ಉದ್ದೇಶ. ನನ್ನ ಧಾರವಾಹಿಗಳಿಗೆ ಅವರು ಸಾಹಿತ್ಯ ಬರೆದರೆ ಒಂದು ರೀತಿ ಪಾಸಿಟಿವ್. ಅವರು ನನ್ನ ಜೊತೆ ಇರುವುದಷ್ಟೇ ಮುಖ್ಯ. ಅವರ ಚಿತ್ರಕಥೆ ಶೈಲಿ ಇಷ್ಟವಾಯಿತು ಹಾಗಾಗಿ ಒಪ್ಪಿಕೊಂಡೆ.

ನಾನೊಬ್ಬ ನಿರ್ದೇಶಕನಾಗಿಯೂ ಕೂಡ ಯಾವುದೇ ವಿಚಾರಕ್ಕೂ ಮಧ್ಯಕ್ಕೆ ಹೋಗದೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದೆ. ಚಿತ್ರಕೂಡ ಅಷ್ಟೇ ಉತ್ತಮವಾಗಿ ಮೂಡಿ ಬಂದಿದೆ. ಇಡೀ ತಂಡದ ಶ್ರಮಕ್ಕೆ ಮುಂದೆ ಉತ್ತಮ ಭವಿಷ್ಯವಿದೆ. ಇದೇ 19ರಂದು ಚಿತ್ರಮಂದಿರದಲ್ಲಿ ಎಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ, ನಾನು ಯಾವುದೇ ಸೆಲೆಬ್ರಿಟಿ , ಫ್ರೀ ಶೋ ಮಾಡುವುದಕ್ಕೆ ಇಷ್ಟಪಡುವುದಿಲ್ಲ.

ಕಷ್ಟಪಟ್ಟ ಮಾಡಿರುವ ಸಿನಿಮಾಕ್ಕೆ ದುಡ್ಡು ಕೊಟ್ಟು ನೋಡುವುದೇ ಉತ್ತಮ ಎಂದರು. ತಂಡಕ್ಕೆ ಶುಭ ಕೋರುವರು ಬಂದಂತ ರವಿಗರಣಿ ಮಾತನಾಡುತ್ತಾ ನನ್ನೊಟ್ಟಿಗೆ ರಾಮ್ ಜಿ ಹಾಗೂ ಹರ್ಷ ಪ್ರಿಯ ಇಬ್ಬರು ಕೆಲಸ ಮಾಡಿದ್ದಾರೆ. ಈ ನಿರ್ದೇಶಕರು ಬಹಳ ಕಷ್ಟಪಟ್ಟು ಸಾಧನೆ ಮಾಡಿ ಮುಂದೆ ಬಂದಿದ್ದಾರೆ. ಹರ್ಷ ಪ್ರಿಯ ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿ. ಇದು ಈಗ ಎಕ್ಸಾಮ್ ಟೈಮ್ ಪ್ರೇಕ್ಷಕರು ನೋಡಿ ರಿಸಲ್ಟ್ ಹೇಳಬೇಕು , ತಂಡಕ್ಕೆ ಯಶಸ್ಸು ಸಿಗಲಿ ಎಂದರು.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವೀನ್ ಕೃಷ್ಣ ಮಾತನಾಡುತ್ತಾ ನಮ್ಮ ಧಿಮಾಕು ಚಿತ್ರದ ಮೂಲಕ ಎಂಟ್ರಿ ಆದ ರಾಜು ಈಗ ಹರ್ಷಪ್ರಿಯ ರಾಗಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಅವರ ಶ್ರಮಕ್ಕೆ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ನನಗೆ ಸೀರಿಯಲ್ ಹಾಗೂ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದಾರೆ. ನನ್ನದು ಒಂದು ವಿಭಿನ್ನ ಪಾತ್ರ ಖಂಡಿತ ನಿಮ್ಮೆಲ್ಲರಿಗೂ ಈ ಚಿತ್ರ ಇಷ್ಟವಾಗುತ್ತೆ ಚಿತ್ರ ನೋಡಿ ಎಲ್ಲರನ್ನೂ ಹರಸಿ ಎಂದರು.

‘ಮಿತ್ರ’ ಈಗ ಖಡಕ್ ವಿಲನ್

ನಾಯಕನಾಗಿ ಭಗತ್ ಅಲ್ವಾ ಮಾತನಾಡುತ್ತಾ ಇವತ್ತು ನನಗೆ ಸೀರಿಯಲ್ ಹಾಗೂ ಸಿನಿಮಾದಲ್ಲಿ ಅವಕಾಶ ಕೊಟ್ಟ ಇಬ್ಬರೂ ಇದ್ದಾರೆ. ನನಗೆ ತುಂಬಾ ಸಂತೋಷದ ದಿನ. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದೆ. ಇದು ನನ್ನ ಮೊದಲ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವಂತಹ ಚಿತ್ರ.

ನನ್ನ ಏಳು ವರ್ಷದ ಸಿನಿಮಾ ಜರ್ನಿಯ ಪಯಣ. ಅದರಲ್ಲೂ ನಾಲ್ಕು ವರ್ಷ ಚೆನ್ನೈನಲ್ಲಿ ಕಲಿತಿದ್ದೇನೆ. ನಾನು ಈ ತಂಡದೊಂದಿಗೆ ಸ್ಕ್ರಿಪ್ಟ್ ಹಂತದಿಂದಲೂ ಕೆಲಸ ಮಾಡಿದ್ದೇನೆ. ಅದು ನನ್ನ ಪಾತ್ರಕ್ಕೂ ಹಾಗೂ ಕಲಿಕೆಗೂ ತುಂಬಾ ಅನುಕೂಲವಾಗಿದೆ. ನನ್ನನ್ನು ಹರಸಿ , ಬೆಳೆಸಿ ಎಂದರು. ಇನ್ನು ನಾಯಕಿಯಾಗಿ ಅಭಿನಯಿಸಿರುವ ಶ್ವೇತಾ ಲಿಯೋನಿಲ್ಲ ಡಿಸೋಜಾ ಮಾತನಾಡುತ್ತಾನಾನು ಇಲ್ಲಿಯವರೆಗೂ ಈ ರೀತಿಯ ಕಥೆಯನ್ನ ನೋಡಿಲ್ಲ. ನನ್ನದು ಬಹಳ ಇಂಪಾರ್ಟೆಂಟ್ ರೋಲ್. ಚಿತ್ರದಲ್ಲಿ ನನ್ನದು ಕಾಡುವಂತಹ ಪಾತ್ರ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಟಿಕೆಟ್ ಪಡೆದು ನಮ್ಮ ಸಿನಿಮಾವನ್ನು ನೋಡಿ ಎಂದರು.

ಉಳಿದಂತೆ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಸೇರಿ ರಂಗಭೂಮಿ ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ .ಎನ್ ನಿರ್ಮಾಣ ಮಾಡಿದ್ದು, ಸುನಿತಾ ಟಿ. ಆರ್. ಸಹ ನಿರ್ಮಾಪಕರಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಅಜಿತ್ ದ್ರಾಕುಲ ಸಂಕಲನ, ಅಮರ ಗೌಡ ಛಾಯಾಗ್ರಹಣ, ಗಿರೀಶ್ ಕನಕಪುರ ಎಕ್ಸಿಕ್ಯೂಟಿವ್, ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸ್ಟೋರಿ ಸಿನಿಮಾ ಇದಾಗಿದ್ದು, ಇದೇ ವಾರ ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ.

You Might Also Like

ಕನ್ನಡಿಗರಿಗೆ ಅವಮಾನ ಆರೋಪ : ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು

11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

ಕನ್ನಡದ ಹಿರಿಯ ನಟ ಹಾಸ್ಯ ನಟ ಉಮೇಶ್‌ ಆಸ್ಪತ್ರೆಗೆ ದಾಖಲು

ತಿಮ್ಮಪ್ಪನ ದರ್ಶನ ಪಡೆದ “ಸೂತ್ರಧಾರಿ” ಟೀಮ್

ಧನ ಸಹಾಯ ಮಾಡಿ ವಯನಾಡು ದುರಂತಕ್ಕೆ ಮಿಡಿದ ಸೆಲೆಬ್ರೆಟಿಗಳು

TAGGED:HejjaruSandalwood
Share This Article
Facebook Copy Link Print
Previous Article GT Devegowda And Kumaraswamy ರೆಬಲ್ ಆದ ಜಿ.ಟಿ.ದೇವೇಗೌಡ, ಕುಮಾರಸ್ವಾಮಿ ನಿರ್ಧಾರಕ್ಕೆ ಅಸಮಾಧಾನ
Next Article Hasanamba Temple ಅ.24 ರಿಂದ ನ.3ರ ವರೆಗೆ ಹಾಸನಾಂಬ ದರ್ಶನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Python Python Python
ಕನಕಪುರ ರಸ್ತೆ ಬಳಿ ಗ್ರಾಮದಲ್ಲಿ 10 ಅಡಿ ಹೆಬ್ಬಾವು ಪ್ರತ್ಯಕ್ಷ
ರಾಜ್ಯ-Karnataka
March 25, 2026
PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up