ಬೆಂಗಳೂರು. ಜು.17 : ಕೊಲೆ ಪ್ರಕರಣದಲ್ಲಿ 20 ವರ್ಷ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ನಿರ್ದೇಶಕ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಗಜೇಂದ್ರ ಅಲಿಯಾಸ್ ಗಜ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೊಲೆ ಕೇಸ್ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ ಕೂಡ ಎಂಟನೇ 8 ಆಗಿದ್ದ. ಕೊಲೆ ಕೇಸ್ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ.ಜಾಮೀನು ಪಡೆದ ಬಳಿಕ ಹಲವು ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 20 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿಲ್ಲ.
ಗಜೇಂದ್ರ ಅಲಿಯಾಸ್ ಗಜ, ಈ ಹಿಂದೆ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ತಮಿಳಿನಲ್ಲಿ ಕಾಲಿವುಡ್ ಇಂಡಸ್ಟ್ರಿಯಲ್ಲೂ ಒಂದೆರಡು ಸಿನಿಮಾ ಮಾಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಇದೀಗ ಗಜೇಂದ್ರನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.

