ಬೆಂಗಳೂರು : ಮಾರೇನಹಳ್ಳಿ To ಸಿಲ್ಕ್ ಬೋರ್ಡ್ ಬಳಿ ನಡೆದ ಘಟನೆ ಬೈಕ್ ವೀಲಿಂಗ್ ಮಾಡುವವರ ಹಾವಳಿ ಮಿತಿಮೀರಿದೆ. ವೀಲಿಂಗ್ ಮಾಡೋದಲ್ದೆ ಸಹ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ವೀಲರ್ಸ್ ನಡುರಸ್ತೆಯಲ್ಲಿ ಧಮ್ಕಿ ಹಾಕಿ ಕಾರಿಗೆ ಒದ್ದು ಪುಂಡಾಟವಾಡಿದ್ದಾರೆ.
ಎರಡು ದ್ವಿಚಕ್ರವಾಹನದಲ್ಲಿ ಬಂದಿದ್ದ ಆರು ಜನ ತ್ರಿಬಲ್ ರೈಡಿಂಗ್ ವೀಲಿಂಗ್ ಮಾಡಿದಲ್ಲದೆ ಕಾರು ಚಾಲಕನಿಗೆ ಧಮ್ಕಿ ಹಾಕಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.

