ಜನಪ್ರಿಯ ಲೇಖಕ ಕುಂ.ವೀರಭದ್ರಪ್ಪ ಅವರ ಕಥೆ ಆಧಾರಿಸಿದ ಸಿನಿಮಾ ‘ಕುಬುಸ’ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ವಸಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಚಿತ್ರ ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಘುರಾಮ್ ಚರಣ್ ಹೂವಿನಹಡಗಲಿ ಈ ಚಿತ್ರ ನಿರ್ದೇಶಿಸಿದ್ದಾರೆ. ಆರ್ ಚಂದ್ರು ಅವರ ಗರಡಿಯಲ್ಲಿ ಪಳಗಿರುವ ರಘು ರಾಮ್ ಚರಣ್ ಹೂವಿನಹಡಗಲಿ ಇವರ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿಎಸ್ ನಾಗಾಭರಣ, ಪ್ರೇಮ್, ಸತ್ಯಪ್ರಕಾಶ್, ನಿರ್ದೇಶನದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕಲಾವಿದನಾಗಿ ಕೆಲಸ ಮಾಡಿದ್ದು ಕುಬುಸ ಅವರೇ ನಿರ್ದೇಶಿಸಿದ ಮೊದಲ ಸಿನಿಮಾ.
ಈ ಸಿನಿಮಾದಲ್ಲಿ ರಾಮ ರಾಮ ರೇ ಖ್ಯಾತಿಯ ನಟರಾಜ್ ಎಸ್ ಭಟ್, ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಅಮ್ಮ ಕುಬುಸ ಸಿನಿಮಾದ ಪ್ರಮುಖ ಆಕರ್ಷಣೆ ನಟರಾಜ್ ಎಸ್ ಭಟ್ , ಚಿತ್ರದಲ್ಲಿ ಎರಡು ಸೇಡ್ ನಲ್ಲಿ ನಡೆಸಿದ್ದು, ಎರಡನೇ ನಾಯಕನಾಗಿ ಒಂದು ಸರಳ ಪ್ರೇಮಕಥೆ, ಪಟಾಕಿ, ಖ್ಯಾತಿಯ ನಾಯಕ ನಟನಾಗಿ ಮೈಸೂರಿನ ಮಂಜು ಆರ್ಯ, ಅನಿಕಾ ರಮ್ಯ, ಮಹಾಲಕ್ಷ್ಮಿ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ.

ಕುಬುಸ ಸಿನಿಮಾದ ಮೂಲ ಕತೆಯಲ್ಲಿ ಇರುವಂತೆ ಬಳ್ಳಾರಿಯ ಭಾಷಾ ಸೊಗಡನ್ನು ಕಾಣಬಹುದು. ಇದು ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ,ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿವೆ . ಪ್ರದೀಪ್ ಚಂದ್ರರವರ ಸಂಗೀತ ಸಂಯೋಜನೆ ಚಿತ್ರಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮ ಎ ಕ್ಯಾಮರಾ, ಕುಬುಸ ಸಿನಿಮಾದ ಎಲ್ಲ ತಾಂತ್ರಿಕ ವರ್ಗದವರು, ಶಿವಮೂರ್ತಿ ದೋಣಿಮಲೆ ಸಹ ನಿರ್ದೇಶನ ಚಿತ್ರಕ್ಕಿದೆ. ಕುಬುಸ ಸಿನಿಮಾಗೆ ಶ್ರೀಮತಿ ವಿ ಶೋಭಾ ಆದಿನಾರಾಯಣರವರ ಚೊಚ್ಚಲ ನಿರ್ಮಾಣದ ಚಲನಚಿತ್ರವಾಗಿದೆ.
ವಿ ಶೋಭಾ ಸಿನಿಮಾಸ್ ಬ್ಯಾನರ್ ನಡಿ ಕುಬುಸ ಚಿತ್ರವನ್ನು ಅವರು ನಿರ್ಮಿಸಿದ್ದಾರೆ.