ಬೆಂಗಳೂರು : ಸದ್ಯದಲ್ಲೇ ಹೆಚ್ಚಾಗಲಿದೆ ವಾಹನಗಳ ಎಮಿಷನ್ ಟೆಸ್ಟಿಂಗ್ ದರ. ಎಮಿಷನ್ ಟೆಸ್ಟಿಂಗ್ ದರ ಏರಿಕೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಮನವಿ ಮಾಡಲಾಗಿದೆ.
ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದ್ರೆ ಎಮಿಷನ್ ಟೆಸ್ಟಿಂಗ್ ಸೆಂಟರ್ ಗಳಿಂದ ಸರ್ಕಾರಕ್ಕೆ 3 ರುಪಾಯಿ 25 ಪೈಸೆ ನೀಡಬೇಕಿತ್ತು.ಇನ್ಮುಂದೆ ಸರ್ಕಾರಕ್ಕೆ 13 ರುಪಾಯಿ 80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.
ಸದ್ಯ ಒಂದು ಬೈಕ್ ಎಮಿಷನ್ ಮಾಡಲು – 65 ರುಪಾಯಿ ತೆಗೆದುಕೊಳ್ಳುತ್ತಾರೆ. ಅದನ್ನು 110 ರುಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ತ್ರಿಚಕ್ರ- ( ಆಟೋ, ಗೂಡ್ಸ್ ಆಟೋ) ಸದ್ಯ 75 ರುಪಾಯಿ 100 ರುಪಾಯಿ ಮಾಡುವಂತೆ ಮನವಿ ಮಾಡಲಾಗಿದೆ.
ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳು- ಸದ್ಯ- 115 ರುಪಾಯಿಯಿಂದ 200 ರುಪಾಯಿ, ಎಲ್ಲಾ ಮಾದರಿಯ ಡಿಸೇಲ್ ವಾಹನಗಳು ( ಲಾರಿ, ಬಸ್ ಹಾಗೂ ಟ್ರಕ್ ) ಸದ್ಯ – 160 ರುಪಾಯಿ 250 ಹೆಚ್ಚಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದಾದ್ಯಂತ ಒಟ್ಟು ಒಟ್ಟು ಮೂರು ಕೋಟಿಗೂ ಹೆಚ್ಚು ವಾಹನಗಳಿವೆ. ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಟೆಸ್ಟ್ ಸರ್ಟಿಫಿಕೇಟ್ ಇಲ್ಲಾಂದ್ರೆ ಟ್ರಾಫಿಕ್ ಪೋಲಿಸರು 500 ರಿಂದ ಸಾವಿರ ರೂ.ದಂಡ ವಿಧಿಸುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲಾಂದ್ರೆ ಆರ್ಟಿಓ ಅಧಿಕಾರಿಗಳು ವಾಹನಗಳಿಗೆ ಎಫ್ಸಿ ಮಾಡೋದಿಲ್ಲ. ಕಾರು,ಬೈಕೂ,ಲಾರಿ ಹಾಗೂ ಬಸ್ಸುಗಳಿಗೆ ಪ್ರತಿ ಆರು ತಿಂಗಳಿಗೆ ಎಮಿಷನ್ ಟೆಸ್ಟ್ ಕಡ್ಡಾಯ.

