ಬೆಂಗಳೂರು : ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!ಟ್ರೇಕಿಂಗ್‌ನಲ್ಲಿ ಸ್ವಲ್ಪ ಯಾಮಾರಿದ್ರೆ ಭಾರೀ ಅಪಾಯ..! ಸರಿಯಾದ ಸುರಕ್ಷತೆ ವಹಿಸದೇ ಇದ್ರೆ ಚರ್ಮದ ಮೇಲೆ ಪರಿಣಾಮ ಬೀರುವುದು ಖಚಿತ.
ಮಳೆಗಾಲ್ಲಿ ಟ್ರೆಕಿಂಗ್ ಹೋಗುವವರ ಸಂಖ್ಯೆ ಹೆಚ್ಚಳವಾಗಿದ್ದು ಮೋಜು-ಮಸ್ತಿಗಾಗಿ ಟ್ರೆಕಿಂಗ್ ನತ್ತಾ ಯುವ ಜನತೆ ಮುಖ ಮಾಡುತ್ತಿದ್ದಾರೆ. ಟ್ರೇಕಿಂಗ್ ಹೋಗಿ ಬಂದ ಬಳಿಕ ಚರ್ಮದ ಖಾಯಿಲೆ ಹಲವರಲ್ಲಿ ಶುರುವಾಗುತ್ತಿದೆ. ಚರ್ಮದ ಖಾಯಿಲೆಯಿಂದ ಆಸ್ಪತ್ರೆಗಳ ಮುಖ ಮಾಡುತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಟ್ರೇಕಿಂಗ್ ವೇಳೆ ಕೀಟಾಣುಗಳ ಕಡಿತದಿಂದ ಚರ್ಮದ ಮೇಲೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇದ್ದು ಲೀಚ್ ಇನ್ನಿತರ ಕೀಟಾಗಳ ಕಡಿತದಿಂದ ಬ್ಲಡ್ ಬ್ಲಿಡಿಂಗ್ ಆಗುವ ಸಾಧ್ಯತೆ ಇದೆ. ಟ್ರೇಕಿಂಗ್ ವೇಳೆ ಸರಿಯಾದ ಟ್ರಿಟ್ಮೆಂಟ್ ಅಸಾಧ್ಯವಾದುದರಿಂದ ಬಳಿಕ ಚರ್ಮದ ಮೇಲೆ ಗಾಯದ ಹಾಗೂ ಗುಳ್ಳೆಗಳು ಬರೋ ಸಾಧ್ಯತೆ ಇದೆ.
ಮಳೆಗಾಲದಲ್ಲಿ ಬರಿಗಾಲಿನಲ್ಲಿ ನಡೆಯೋ ಮುನ್ನ ಎಚ್ಚರ, ಅದರಲ್ಲೂ ಸಿಲಿಕಾನ್ ಸಿಟಿ ಮಂದಿ ಬಿ ಕೇರ್ ಫುಲ್, ನಗರದ ಕಲುಷಿತಾ ನೀರಿನಿಂದ ಸ್ಕೀನ್ ಅಲರ್ಜಿಯಾಗಬಹುದು.
ಕಲುಷಿತ ನೀರಿನಿಂದ ಕಾಲುಗಳಲ್ಲಿ ಫಂಗಲ್ ಇನ್ಫೆಕ್ಷನ್ ಅಗುವ ಸಾಧ್ಯತೆ ಇದ್ದು ಹಾಗಾಗಿ ಅದಷ್ಟೂ ಶೂ ಯೂಸ್ ಮಾಡಲು ವೈದ್ಯರ ಸಲಹೆ ನೀಡಿದ್ದಾರೆ. ಟ್ರೆಕಿಂಗ್ ಹಾಗೂ ಮಳೆಯಲ್ಲಿ ಆದಷ್ಟೂ ಎಚ್ಚರವಹಿಸುವಂತೆ ವೈದ್ಯರ ಸಲಹೆ ನೀಡಿದ್ದಾರೆ.

