ಬೆಂಗಳೂರು : ಇಂದಿರಾ ಕ್ಯಾಂಟೀನ್ ಹೊಸ ಗುತ್ತಿಗೆದಾರರ ಆಯ್ಕೆ ಬೆನ್ನಲೆ ಹೊಸ ಮೆನ್ಯೂಗೆ ಚಾಲನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನಲ್ಲಿ ರಾಗಿ ಮುದ್ದೆ-ಚಪಾತಿ ಊಟ ಲಭ್ಯವಾಗಲಿದ್ದು, ಪ್ರತಿನಿತ್ಯ ಬೆಳಗ್ಗೆ ಟೀ-ಕಾಫಿ, 3 ಬಗೆಯ ತಿಂಡಿ ಸಿಗಲಿದೆ. ಆಗಸ್ಟ್ 15 ರವೇಳೆಗೆ ಚಪಾತಿ ಸೇರಿ ಹೊಸ ಮೆನು ಜಾರಿ ಬರಲಿದೆ.
ಇಂದಿರಾ ಕ್ಯಾಂಟೀನ್ ಆಹಾರದ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಮೆನು ಬದಲಾವಣೆ ಮಾಡಲಾಗಿದ್ದು ಬಿಬಿಎಂಪಿಯ 192 ಇಂದಿರಾ ಕ್ಯಾಂಟೀನ್ ಪೈಕಿ 142 ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಗೆ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ.
ಆಗಸ್ಟ್ 2ನೇ ವಾರದಿಂದ ಆಹಾರ ಪೂರೈಕೆ ಆರಂಭಿಸಲಿರುವ ಗುತ್ತಿಗೆದಾರರು ಬೆಳಗ್ಗಿನ ಉಪಹಾರ ಕಾಫಿ, ಟೀ ಜತೆಗೆ 3 ಬಗೆಯ ಉಪಾಹಾರ ನೀಡಲಿದ್ದಾರೆ. ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ದೊರೆಯಲಿದೆ. ಮೂರು ಇಡ್ಲಿ (150 ಗ್ರಾಂ) ಮತ್ತು ಸಾಂಬಾರ್ (100 ಗ್ರಾಂ) ಸಿಗಲಿದೆ.
ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ (225 ಗ್ರಾಂ) ಜತೆಗೆ ಚಟ್ಟಿ, ಸಾಂಬರ್, ಮೊರಸು ಬಜ್ಜಿ (100 ಗ್ರಾಂ) ಹಾಗೂ ಖಾರಾ ಬೂಂದಿ (15 ಗ್ರಾಂ) ನೀಡಲಾಗುತ್ತದೆ. ಪಲಾವ್, ಬಿಸಿಬೇಳೆ ಬಾತ್. ಕಾರಬಾತ್ ಪೊಂಗಲ್ ಸಿಗಲಿದೆ.
ಭಾನುವಾರ ಮಾತ್ರ ಚೌಚೌ ಬಾತ್ ನೀಡಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 2 ಬಗೆಯ ಆಯ್ಕೆಯಿದ್ದು ನಗರದ ಜನರ ಬಹುದಿನ ಬೇಡಿಕೆಯಂತೆ ಮುದ್ದೆ ಮತ್ತು ಚಪ್ಪಾತಿಯನ್ನು ನೀಡಲಾಗುತ್ತಿದೆ.
ವಾರದ 7 ದಿನದಲ್ಲಿ ದಿನ ಮುದ್ದೆ ಮತ್ತು ಚಪಾತಿ ನೀಡಲಾಗುತ್ತದೆ. ಜತೆಗೆ,
ಈ ಹಿಂದೆ ಇರುವಂತೆ ಅನ್ನ ಸಾಂಬಾರ್ ಮುಂದುವರೆಸಲಾಗುತ್ತಿದೆ. ಅನ್ನ ಸಂಬರ್ ಅಥವಾ ಮುದ್ದೆ/ಚಪಾತಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ

