ಬೆಂಗಳೂರು : ಜಿಕೆವಿಕೆಯಲ್ಲಿ ಇಂದು ಕೃಷಿ ಸಂತೆ ಆಯೋಜಿಸಲಾಗಿತ್ತು. ವಿವಿ ಗಣಪತಿ ದೇಗುಲ ಬಳಿ ಆಯೋಜನೆ ಮಾಡಿದ್ದ ಕೃಷಿ ಸಂತೆ ಕಾರ್ಯಕ್ರಮದಲ್ಲಿ ಬೆಳ್ಳಗೆಯಿಂದಲೇ ಬೆಂಗಳೂರು ಮಂದಿ ಸಂತೆಗೆ ಬರುತ್ತಿದ್ದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಸಂಸ್ಕರಿಸಿದ ಪದಾರ್ಥಗಳು, ತಂತ್ರಜ್ಞಾನ, ಯಂತ್ರೋಪಕರಣಗಳೂ ಸೇರಿದಂತೆ ನಾನಾ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿತ್ತು.
ಕೃಷಿ ವಿವಿಯ ಕಾರ್ಯವೈಖರಿ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ನಡೆಯಿತು. ವಿವಿ ಅಭಿವೃದ್ಧಿಪಡಿಸಿ, ಬೆಳೆಸಿರುವ ಹಣ್ಣು, ತರಕಾರಿ, ಹೊಸ ಹೊಸ ತಳಿಗಳು ಸಂತೆಯಲ್ಲಿ ಮಾರಾಟ ಮಾಡಲಾಯಿತು.
ಕಿಚನ್ ಗಾರ್ಡನ್‌ಗೆ ಬೇಕಾದ ಪರಿಕರಗಳು, ಬೀಜ-ಸಸಿಗಳು ಕೂಡ ಲಭ್ಯವಿದ್ದವು. ಸಣ್ಣ ಮಟ್ಟದಲ್ಲಿ ಗಾರ್ಡನ್ ಮಾಡುವವರಿಗೂ ಕೃಷಿ ಸಂತೆಯಿಂದ ನಾನಾ ಅನುಕೂಲ ಕಲ್ಪಿಸಲಾಗಿತ್ತು.

