ಬೆಂಗಳೂರು : ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಪುಂಡರ ಹಾವಳಿ ಹೆಚ್ಚಾಗ್ತಿದೆ , ನೆನ್ನೆ ತಡರಾತ್ರಿ ವಿಜಯನಗರ ಬಳಿ ಪುಂಡರು ಕುಕೃತ್ಯ ಮೆರೆದಿದ್ದಾರೆ .. ವೀಲಿಂಗ್ ಚಟಕ್ಕೆ ಬಿದ್ದವರ ಮೇಲೆ ಸದ್ಯ ಕಠಿಣವಾದ ಕ್ರಮ ಕೈಗೊಳ್ಳಲಾಗಿದೆ.
ಮಾರೇನಹಳ್ಳಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಮತ್ತೊಂದು ಕೇಸ್ ರಿಪೋರ್ಟ್ ಆಗಿದೆ. ಮೊನ್ನೆ ತಾನೆ ಉದ್ಘಾಟನೆಯಾದ ಡಬ್ಬಲ್ ಡೆಕ್ಕರ್ ಬ್ರಿಡ್ಜ್ ಈಗ ವೀಲಿಂಗ್ ಮಾಡುವವರಿಗೆ ಹಾಟ್ ಫೇವರೇಟ್ ಆಗಿದೆ. ಎರಡು ಬೈಕುಗಳಲ್ಲಿ ಬಂದಿದ್ದ ಒಟ್ಟು ಆರು ಜನ ಪುಂಡರು ಪಕ್ಕದಲ್ಲಿ ಚಲಿಸುತ್ತಿದ್ದ ಕಾರು ಚಾಲಕನಿಗೆ ಚಾಕು ತೋರಿಸಿ ಧಮ್ಕಿ ಹಾಕಿದ್ದಾರೆ. ಅಷ್ಟೆ ಅಲ್ಲದೆ ಚಲಿಸುತ್ತಿದ್ದ ಕಾರಿಗೆ ಒದಿಯಲು ನೋಡಿದ್ದಾರೆ. ನಂತರ ವೀಲಿಂಗ್ ಮಾಡಿ ದ್ದಾರೆ. ಇವೆಲ್ಲಾವೂ ಹಗಲು ಹೊತ್ತಿನಲ್ಲಿಯೇ ನಡೆದಿದೆ..
ಈ ಬಗ್ಗೆ ವಿಚಾರಣೆ ನಡೆಸಿದಾಗ ವೀಲಿಂಗ್ ಮಾಡ್ತಿದ್ದ ಯುವಕರ ಕಾರು ಚಾಲಕ ಪ್ರಶ್ನೆ ಮಾಡಿದ್ನಂತೆ. ಪ್ರಶ್ನೆ ಮಾಡಿದ್ದೆ ತಪ್ಪು ಎಂಬಂತೆ ಕಾರು ಚಾಲಕನ ಪಕ್ಕ ಬಂದು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು.
ಸುಮೋಟೋ ಕೇಸ್ ದಾಖಲು ಮಾಡಿ ಮೂವರು ಅಪ್ರಾಪ್ತರನ್ನ ವಶಕ್ಕೆ ಪಡೆದು ಯುವಕ ಸಂಜಯ್ ಎಂಬಾತನನ್ನ ಬಂಧಿಸಿದ್ದಾರೆ. ಚಾಕು ತೋರಿಸಿ ಬೆದರಿಕೆ ಹಾಕಿದ ಹಿನ್ನಲೆ ಇದೊಂದು ಕ್ರಿಮಿನಲ್ ಕೃತ್ಯ ಎನಿಸಿಕೊಂಡಿದೆ. ಈ ಹಿನ್ನಲೆ ಸುದ್ಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.