ಬೆಂಗಳೂರು : ಕೆಲಸದ ಸಮಯದ ಹೆಚ್ಚಳ ವಿಚಾರವಾಗಿ IT- BT ಸಂಘಟನೆಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕಾ ಖರ್ಗೆ, ನಮ್ಮ ಕಾಯಿದೆಯಲ್ಲಿ ಯೂನಿಯನ್ ಗಳನ್ನು ರೆಕಗ್ನೈಸ್ ಮಾಡಲ್ಲ, ಕೆಲವು ಜನ ಸೇರಿ ಯೂನಿಯನ್ ಮಾಡಿದ್ದಾರೆ, ಅದೇನೇ ಇರಲಿ, ಅವರ ಅಭಿಪ್ರಾಯ ಗಣನೆಗೆ ತೆಗೆದುಕೊಂಡೇ ಮಾಡಬೇಕು ಎಂದಿದ್ದಾರೆ.
ಈ ಕಾಯಿದೆ ಎಲ್ಲಾ IT ಇಂಡಸ್ಟ್ರೀಸ್ ಗು ಅನ್ವಯಿಸಲ್ಲ, ರಿಸೋರ್ಸ್, ಸೆಮಿಕಂಡಕ್ಟರ್, ಚಿಪ್ ಮ್ಯಾನಿಪ್ಯಾಕ್ಚರ್ ಇಂಡಸ್ಟ್ರೀಸ್ ಗೆ ಮಾತ್ರ ಅನ್ವಯಿಸುತ್ತೆ. ಅವರ ಬೇಡಿಕೆಯ ಮೇರೆಗೆ ನಾವು ಲೇಬರ್ ಡಿಪಾರ್ಟ್ಮೆಂಟ್ ಗೆ ಪಾರ್ವರ್ಡ್ ಮಾಡಿದ್ದೇವೆ ಅಷ್ಟೇ ಇದರಲ್ಲಿ ವಿತೌಟ್ ಕನ್ಸಲ್ಟೇಶನ್ ಏನೂ ಆಗಲ್ಲ ಎಂದರು.
ಖಾಸಗಿ ಕಂಪನಿಗಳು, ಲೇಬರ್ ಡಿಪಾರ್ಟ್ಮೆಂಟ್ ಪರ್ಮೀಶನ್ ತಗೋಬೇಕು ಗುಜರಾತ್, ತಮಿಳುನಾಡು, ತೆಲಂಗಾಣ ಸೇರಿ ಕೆಲವು ಕಡೆ ಇದು ಇದೆ ನಾವೇನು ಹೊಸದಾಗಿ ತರ್ತಿಲ್ಲ, ನಾವೇನಿದ್ರು ಕನ್ಸಲ್ಟೇಶನ್ ತಗೊಂಡೇ ಮಾಡೊದು ಎಂದಿದ್ದಾರೆ.
ನಮಗೆ ಬಂಡವಾಳನೂ ಬೇಕು, ಉದ್ಯೋಗನೂ ಸೃಷ್ಟಿ ಮಾಡಬೇಕು ಅಂದ್ರೆ, ಚೈನಾ ಜೊತೆ ಕಾಂಫೀಟ್ ಮಾಡಬೇಕು ಅಂತಾನೂ ಹೇಳ್ತೀರಾ, ಮತ್ತೊಂದೆಡೆ ನೀತಿ ನಯಮಾನು ತರಬಾರದು ಅಂತ ಹೇಳ್ತೀರಾ ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದಮೇಲೆ ತೀರ್ಮಾನ ಮಾಡ್ತೀವಿ ಕಾರ್ಮಿಕ ಸಚಿವರು, ಎಂಬಿ ಪಾಟೀಲ್, ನಾನು ಎಲ್ಲರೂ ಒಂದೇ ಸ್ಟಾಂಡ್ ನಲ್ಲಿ ಇದ್ದೀವಿ ಎಂದರು.

