‘ಕಾಟೇರ’ ಸಿನಿಮಾ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಸುಧೀರ್ ಮತ್ತು ಸೋನಲ್ ಅವರ ಮದುವೆಯು ಅದ್ದೂರಿಯಾಗಿ ನಡೆದಿದೆ. ಸ್ಟಾರ್ ಜೋಡಿಗೆ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
ನಟಿ ಸೋನಲ್ ಮೊಂಥೆರೋ ಅವರು ಮೂಲತಃ ಮಂಗಳೂರಿನವರು. ಸೋನಲ್ ಕ್ರೈಸ್ತ ಧರ್ಮಕ್ಕೆ ಸೇರಿದ್ದು, ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ನಡೆಯಲಿದೆ.
ಆರತಕ್ಷತೆಗೆ ಬಿ ಎಸ್ ಯಡಿಯೂರಪ್ಪ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಆಗಮಿಸಿದ್ದರು. ರಿಷಬ್ ಶೆಟ್ಟಿ, ಯೋಗರಾಜ್ ಭಟ್, ಉಪೇಂದ್ರ, ದುನಿಯಾ ವಿಜಯ್, ಧನಂಜಯ್, ಸುನೀಲ್ ರಾವ್, ಜೈಗದೀಶ್, ಅಜಯ್ ರಾವ್, ವಿನೋದ್ ಪ್ರಭಾಕರ್, ಮಾಲಾಶ್ರೀ ಸೇರಿದಂತೆ ಅನೇಕರು ಆಗಮಿಸಿದ್ದರು. ಮುಹೂರ್ತ ಸಮಾರಂಭಕ್ಕೂ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು. ಆಶಿಕಾ ರಂಗನಾಥ್, ನಿಶ್ವಿಕಾ ನಾಯ್ಡು, ಸುಧಾರಾಣಿ, ಮಾಳವಿಕಾ ಅವಿನಾಶ್, ವಿ ಹರಿಕೃಷ್ಣ ಮುಂತಾದವರು ಆಗಮಿಸಿದ್ದರು.

