ತುಮಕೂರು : ಎರಡು ಬೈಕ್ ಗಳ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಜರುಗಿದೆ.
ಹೊಳೆ ನರಸಿಪುರ ತಾಲೂಕು, ಕಳ್ಳಿ ಮೂಲದ ನವೀನ್ , ಶೇಷಾದ್ರಿ ಮೃತ ದುರ್ದೈವಿಗಳು. ಬೈಕ್ ನಲ್ಲಿ ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್ಗಳ ನಡುವೆ ಡಿಕ್ಕಿ ಹೊಡೆದಿದೆ.