ಬೆಂಗಳೂರು: ನಟ ದರ್ಶನ್ ಮೇಲಿನ ಅಂಧಭಿಮಾನ ಪ್ರದರ್ಶನಕ್ಕೆ ಹೆತ್ತ ಮಗುವನ್ನೇ ದರ್ಶನ್ (Darshan) ಖೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್ ಮಾಡಿಸಿದ್ದರು. ಇದೀಗ ಮಗುವಿನ ಪೋಷಕರಿಗೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (State Commission for Protection of Child Rights) ಮುಂದಾಗಿದೆ.
ಹೌದು. ದರ್ಶನ್ ಮೇಲಿನ ಅಂಧಭಿಮಾನ ಪ್ರದರ್ಶನಕ್ಕೆ ಮುಂದಾಗಿ ಕಾನೂನಿನ ಕೈಗೆ ಈಗ ಪೋಷಕರು ತಗ್ಲಾಕಿಕೊಂಡಿದ್ದಾರೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 116 ಮಂದಿ ಬಲಿ
ಸದ್ಯ ಮಕ್ಕಳ ಹಕ್ಕುಳ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಅವರು ಈ ಕುರಿತು ಪ್ರತಿಕ್ರಿಯಿಸಿ, ಈ ರೀತಿ ಫೋಟೋ ಶೂಟ್ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಈ ಬಗ್ಗೆ ಇವತ್ತು ಪೊಲೀಸ್ ಇಲಾಖೆ ಐಟಿ ಸೆಲ್ ಪತ್ರ ಬರೆಯಲಾಗುತ್ತದೆ. ಪೋಟೋ ಶೂಟ್ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಕನ್ನಡಿಗ ಯೋಧ ಹುತಾತ್ಮ
ಈ ಫೋಟೋ ಶೂಟ್ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಇದು ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಕಾನೂನಿನಡಿ ಯಾವೆಲ್ಲ ಕ್ರಮಗಳಿಗೆ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ: ಪರಂ

