ಹಾಸನ: ಲೋಕಸಭಾ ಚುನಾವಣೆಯ (Loka Sabha Election) ಅಬ್ಬರದ ನಡುವೆ ಕೆಲ ದಿನಗಳಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇ ವೇಳೆ ಅಭಿಮಾನಿಯೊಬ್ಬ (Fan) ಪ್ರಜ್ವಲ್ ರೇವಣ್ಣಗೆ ಶುಭಾಶಯಗಳನ್ನು (Greetings) ತಿಳಿಸಿದ್ದಾನೆ.
ಈ ಪತ್ರ ಹಾಸನ ನಗರದ ಆರ್.ಸಿ (R.C. Road) ರಸ್ತೆಯಲ್ಲಿರುವ ಸಂಸದರ ಕಚೇರಿ ಬಾಗಿಲು ಬಳಿ ಸಿಕ್ಕಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಪ್ರಜ್ವಲ್ ರೇವಣ್ಣಗೆ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದಿದ್ದಾನೆ. ಇದನ್ನೂ ಓದಿ: ಅಮೇಥಿ ಬದಲು ರಾಯ್‌ಬರೇಲಿಯಿಂದ ರಾಹುಲ್ ಕಣಕ್ಕೆ
ಪತ್ರದಲ್ಲೇನಿದೆ..?:
ನೀವು ಈಗಾಗಲೇ ಹಾಸನ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಈ ಸಲವೂ ತಾವುಗಳೇ ಚುನಾಯಿತರಾಗುತ್ತೀರಿ ಎಂದು ನಾನು ನಂಬುತ್ತೇನೆ. ಇನ್ನು ಮುಂದೆಯೂ ಹಾಸನ ಮತ್ತು ಕರ್ನಾಟಕಕ್ಕೆ ತಮ್ಮಿಂದ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಕುಷ್ಟಗಿ ಮೂಲದ ಶಂಕರಗೌಡ ಎಂಬವರು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಜ್ವಲ್‌ಗೆ ಹೆಚ್ಚಿದ ಸಂಕಷ್ಟ: ದಾಖಲಾಯ್ತು ಅತ್ಯಾಚಾರ ಪ್ರಕರಣ