ಬೆಂಗಳೂರು : ಇತ್ತೀಚೆಗೆ ತೆಲುಗಿನ ‘ಲಕ್ಕಿ ಭಾಸ್ಕರ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿ ಕಂಡಿತ್ತು. ಆ ಚಿತ್ರದಲ್ಲಿ ನಟ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲೇ ಹಣವನ್ನು ಕದ್ದು ಬೇರೆಡೆ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾನೆ.
ಒಂದು ಚಿಕ್ಕ ಸುಳಿವು ಕೂಡ ನೀಡದೇ ನಟ ಅದರಿಂದ ಪಾರಾಗುತ್ತಾನೆ. ಆದರೆ ಇಂತಹದೇ ಒಂದು ಘಟನೆ ನಗರದಲ್ಲಿ ನಡೆದಿದ್ದು, ಖಾಸಗಿ ಕಂಪನಿ ಸಿಬ್ಬಂದಿ ಓರ್ವ, ಒಂದಲ್ಲ ಎರಡಲ್ಲ ಬರೋಬ್ಬರಿ 7 ಕೋಟಿ ರೂ. ಹಣ ಬೆಟ್ಟಿಂಗ್ಗೆ ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಯಸ್ ಒಲ್ಲೊಬ್ಬ ಆಸಾಮಿ ಖಾಸಗಿ ಕಂಪನಿಯೊಂದರ ಬರೋಬ್ಬರಿ 7 ಕೋಟಿ ರೂ. ಹಣವನ್ನು ಬೆಟ್ಟಿಂಗ್ಗೆ ಹಾಕಿದ್ದಾರೆ. ಎಲೆಕ್ಟ್ರಿಸಿಟಿ ಬಿಲ್ ಪಾವತಿಸದೇ ಬೆಟ್ಟಿಂಗ್ನಲ್ಲಿ ಹೂಡಿಕೆ ಮಾಡಿದ್ದಾರೆ. ಆದ್ರೀಗ ಆಡಿಟಿಂಗ್ ವೇಳೆ ವಿಚಾರ ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ

