ಬೆಂಗಳೂರು: ದಿನೆ ದಿನೇ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ನಗರದ ಕೊಡಿಗೇಹಳ್ಳಿಯಲ್ಲಿ (Kodigehalli) ಮತ್ತೊಂದು ಪ್ರಕರಣ ದಾಖಲಾಗಿದೆ.
ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ (Virupakshapura) ಮಂಗಳವಾರ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಿಹಾರ ಮೂಲದ ದಂಪತಿಗೆ ತೊಂದರೆ ಮಾಡಿ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾರೆ. ಒಂದು ವೇಳೆ ಒಪ್ಪದೆ ಇದಲ್ಲಿ ಕಿಡ್ನ್ಯಪ್ (Kidnap) ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ನೋಟಿಸ್
ಇದಾದ ಬಳಿಕ ದಂಪತಿ ಸ್ಥಳದಿಂದ ಓಡಿಹೋಗಲು ಮುಂದಾದಾಗ ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಹೆಂಡತಿಯನ್ನ8ಉ ಕಳೂಹಿಸುವಂತೆ ಗಂಡನಿಗೆ ಬೆದರಿಕೆ ಹಾಕಿದ್ದಾರೆ. ದಂಪತಿ ತಕ್ಷಣವೇ ಪೊಲೀಶರಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್ ದರದದಲ್ಲಿ 19 ರೂ. ಇಳಿಕೆ
ಆ ನಂತರ ಅವರು ಬಿಹಾರದ ಪೊಲೀಸರಿಗೂ ಕರೆ ನೆರವು ಕೋರಿದ್ದಾರೆ. ಸದ್ಯ ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಯಾವ ಶಾಲೆ?

