ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ (Mahalingapura) ಗರ್ಭಪಾತ (Abortion) ದಂಧೆಗೆ ಮಹಿಳೆ ಬಲಿಯಾದ (Death) ಪ್ರಕರಣಕ್ಕೆ ಸಂಬಂಧಿಸಿ ಮೃತ ಮಹಿಳೆ ಸೋನಾಲಿ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಗಳ ಗರ್ಭಪಾತಕ್ಕೆ (foeticide) ಪ್ರೇರೇಪಣೆ ಆರೋಪದ ಮೇರೆಗೆ ಸೋನಾಲಿ ತಂದೆ ಸಂಜಯ್ ಗೌಳಿ ಮತ್ತು ತಾಯಿ ಸಂಗೀತಾ ಗೌಳಿಯನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ: ಶಾಮನೂರು ಶಿವಶಂಕರಪ್ಪ
ಗರ್ಭಪಾತ, ಭ್ರೂಣಹತ್ಯೆಗೆ ಕಾರಣಳಾದ ಆರೋಪಿ ಕವಿತಾ ಬಾದನ್ನವರ ಅರೆಸ್ಟ್ ಮಾಡಲಾಗಿದೆ. ಈಕೆ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಈಗ ಗರ್ಭಪಾತ ದಂಧೆ ಮಾಡಿ ಮಹಿಳೆ ಬಲಿ ಪಡೆದು ಜೈಲು ಸೇರಿದ್ದಾಳೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನೇಹಾ ಗೌಡ ದಂಪತಿ
ಮಕ್ಕಳ ಹಕ್ಕುಗಳ ರಕ್ಚಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿರುವ ಆರೋಪಿ ಕವಿತಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗೆ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ-ಆರೋಪಿ ಅಪ್ರಾಪ್ತನ ತಾಯಿ ಬಂಧನ
ಕವಿತಾ ಬಳಿ ಸ್ಕ್ಯಾನಿಂಗ್ ಮಷೀನ್ ಹೇಗೆ ಬಂತು ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕಿದೆ, ಗೋಕಾಕ್ ಮೂಲದ ಯಾವುದೋ ಒಂದು ಆಸ್ಪತ್ರೆಯ ಹೆಸರಲ್ಲಿ ಅವರ ಬಳಿ ಸ್ಕ್ಯಾನಿಂಗ್ ಮಷೀನ್ ಇದೆ. ಅದನ್ನೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಈ ಪ್ರಕರಣದಲ್ಲಿ ಯಾರ್ಯಾರೂ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು ಎಂದರು. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 69.50 ರೂ. ಇಳಿಕೆ

