ನವದೆಹಲಿ: ಇಂದಿನಿಂದ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್‌ಗೆ ಕಠಿಣ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಗ್ಯಾಸ್ ಡೆಲಿವರಿ ಆದ ನಂತರ ನಿಗದಿತ ಅವಧಿಗೂ ಮೊದಲು ಬುಕ್ಕಿಂಗ್ ಮಾಡಿದರೆ ಗ್ರಾಹಕರ ಖಾತೆಗಳನ್ನು ಬ್ಲಾಕ್ ಮಾಡುವುದಾಗಿ ಗ್ಯಾಸ್ ಕಂಪನಿಗಳು ಸ್ಪಷ್ಟಪಡಿಸಿವೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ತಿಳಿದುಬಂದಿದೆ. ಸಿಂಗಲ್ ಮತ್ತು ಡಬಲ್ ಗ್ಯಾಸ್ ಕನೆಕ್ಷನ್‌ಗಳಿಗೆ ವಿಭಿನ್ನ ಅವಧಿಯನ್ನು ನಿಗದಿಪಡಿಸಲಾಗಿದೆ.
ಸಿಂಗಲ್ ಕನೆಕ್ಷನ್ ಹೊಂದಿರುವ ಗ್ರಾಹಕರು ಈಗ ಡೆಲಿವರಿ ಆದ 25 ದಿನಗಳ ಬಳಿಕ ಮಾತ್ರ ಮರು ಬುಕ್ಕಿಂಗ್ ಮಾಡಬಹುದು. ಡಬಲ್ ಕನೆಕ್ಷನ್‌ಗಳಿಗೆ 35 ದಿನಗಳ ನಂತರವೇ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. 5 ಕೆಜಿ ಸಿಲಿಂಡರ್‌ಗಳಿಗೆ 16 ದಿನಗಳ ಗಡುವು ನಿಗದಿಯಾಗಿದ್ದು, 10 ಕೆಜಿ ಸಿಲಿಂಡರ್‌ಗಳಿಗೆ 32 ದಿನಗಳ ಬಳಿಕವೇ ಬುಕ್ಕಿಂಗ್ ಮಾಡಬೇಕಾಗಿದೆ.
ಉಜ್ವಲ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆಯುವ ಗ್ರಾಹಕರು ಈಗ 45 ದಿನಗಳ ಬಳಿಕ ಮಾತ್ರ ಮರು ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ ಡಿಜಿಟಲ್ ಪಾವತಿ ಆ್ಯಪ್‌ಗಳ ಮೂಲಕ ಗ್ಯಾಸ್ ಬುಕ್ಕಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫೋನ್‌ಪೇ, ಗೂಗಲ್ ಪೇ, ಅಮೆಜಾನ್ ಪೇ ಸೇರಿದಂತೆ ವಿವಿಧ ಆ್ಯಪ್‌ಗಳಲ್ಲಿ ಬುಕ್ಕಿಂಗ್ ಸೌಲಭ್ಯ ಲಭ್ಯವಿರುವುದಿಲ್ಲ. ಹಣ ಕಡಿತವಾದರೂ ಬುಕ್ಕಿಂಗ್ ದೃಢವಾಗುವುದಿಲ್ಲ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ.
ಪರ್ಯಾಯವಾಗಿ, ಐವಿಆರ್‌ಎಸ್, ಮಿಸ್ಡ್ ಕಾಲ್ ಹಾಗೂ ವಾಟ್ಸಪ್ ಮೂಲಕ ಮಾತ್ರ ಗ್ಯಾಸ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

