ತುಮಕೂರು: ದೇವರಾಯನ ದುರ್ಗದ ದೇವಸ್ಥಾನದ ಅರ್ಚಕರಿಗೆ ಭಕ್ತಾಧಿಗಳಿಂದ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಆಂಜನೇಯಸ್ವಾನಿ ಸ್ವಾಮಿ ದೇವಸ್ಥಾನದ ಅರ್ಚಕರಿಗೆ ಭಕ್ತರು ಥಳಿಸಿದ್ದಾರೆ.
ದೇವರಾಯನ ದುರ್ಗದ ಶ್ರೀ ಆಂಜನೇಯ ಸ್ವಾಮಿ ಸ್ವಾಮಿ ದೇವಸ್ಥಾನದ ಅರ್ಚಕ ನಾಗಭೂಷಣಾಚಾರ್ ಅವರನ್ನ ಭಕ್ತಾಧಿಗಳು ಥಳಿಸಿದ್ದು, ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕುಂಕುಮ ಇಡುವ ವೇಳೆ ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿಸಿದ ಆರೋಪ ಹಿನ್ನೆಲೆಯಲ್ಲಿ ತುಮಕೂರಿನ ದೇವರಾಯನದುರ್ಗ ಅರ್ಚಕನ ಮೇಲೆ ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅರ್ಚಕ ನಾಗಭೂಷಣಾಚಾರ್ಯಗೆ ಮಹಿಳೆಯರು, ಇಬ್ಬರು ಯುವಕರು ಸೇರಿಕೊಂಡು ಕೋಲುನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾಲ್ಕು ದಿನದ ಹಿಂದೆಯೇ ಈ ಘಟನೆ ನಡೆದಿದ್ದು ತಡವಾಗ ಬೆಳಕಿಗೆ ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

