ಕೋಲಾರ : ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿದಂತೆ 9 ಕಡೆ ವಿವಿಧ ಸಂದರ್ಭದಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಬಲಿಯ ಇಲಿಯಾಸ್ ನಗರದ ನಿವಾಸಿ ಸಯ್ಯದ್ ಅಪ್ಸರ್ 37 ಬಂಧಿತ ಆರೋಪಿ ಆತನಿಂದ 557 ಗ್ರಾಮ ಚಿನ್ನ ಎರಡುವರೆ ಕೆಜಿ ಬೆಳ್ಳಿ ಸೇರಿದಂತೆ ಸುಮಾರು 52.63 ಲಕ್ಷ ಮೌಲ್ಯದ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಮುಳಬಾಗಿಲು ನಗರದ ಮಂಜುನಾಥ್ ಕಾಲೋನಿಯ ಸೋಮಶೇಖರಪ್ಪ ಎಂಬುವರ ನಿವಾಸದಲ್ಲಿ ಏಪ್ರಿಲ್ 4 ನಾಲ್ಕರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನ ಕದ್ದಿರುವ ದೂರಿನ ಸಂಬಂಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು ಆರೋಪಿ ಸೈಯದ್ ಅಪ್ಸರ್ ನನ್ನು ವಶಕ್ಕೆ ಪಡೆದು ವಿಚಾರ ನಡೆಸಿದಾಗ ವಿಷಯ ಗೊತ್ತಾಗಿದೆ.
ನಂಗಲಿ, ಬೈರಕೂರು ಮುಂತಾದ ಗ್ರಾಮಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು
ಕೋಲಾರ ಜಿಲ್ಲಾ ವರಿಷ್ಠಾಧಿಕಾರಿಗಳಾಗಿದ ಬಿ ನಿಖಿಲ್ ರವರ ನೇತೃತ್ವದಲ್ಲಿ ಮುಳಬಾಗಿಲು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆದ ಸತೀಶ್ ಅವರ ನೇತೃತ್ವದಲ್ಲಿ ಪಿ ಎಸ್ ಐ ಅರ್ಜುನ್ ಗೌಡ ನಂಗಲಿ ತಾನೆ ಸಿಬ್ಬಂದಿ ಸುರೇಶ್ ಪವನ್ ಕಾರ್ಯಚರ ನಡೆಸಿದರು ಅವರ ಕೆಲಸಕ್ಕೆ ಕೋಲಾರ ಜಿಲ್ಲೆಯ ವರಿಷ್ಟಾಧಿಕಾರಿಗಳಾದ ಬಿ ನಿಖಿಲ್ ರವರು ಮೆಚ್ಚುಗೆ ಸೂಚಿಸಲಾಗಿದೆ.
ವರದಿ.. ಅರುಣ್ ಕುಮಾರ್