ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಇಂದು (ಜೂನ್ 18) ನಟ ದರ್ಶನ್ (Darshan) ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ಹೀರೋಗಳಿಗೆ ನೋಟಿಸ್ ನೀಡೋ ಕೆಲಸ ಆಗುತ್ತಿದೆ. ಪಾರ್ಟಿಯಲ್ಲಿ ಚಿಕ್ಕಣ್ಣ ಇದ್ದರು ಅನ್ನೋ ಕಾರಣಕ್ಕೆ ಅವರಿಗೂ ನೋಟಿಸ್ ಹೋಗಿದೆ. ಅವರು ವಿಚಾರಣೆಗೆ ಹಾಜರಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣSIT ಕಸ್ಟಡಿ ಇಂದಿಗೆ ಅಂತ್ಯ- ಕೋರ್ಟ್ ಮುಂದೆ ಹಾಜರು
ಕೊಲೆ ಬಳಿಕ ದರ್ಶನ್ ಅವರು ಮೈಸೂರಿಗೆ ತೆರಳಿ ಅಲ್ಲಿ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. . ಅಲ್ಲಿ ಹೋಟೆಲ್‌ನಲ್ಲಿ ಶರಣಾಗಲು ಕೆಲವರು ಒಪ್ಪದೇ ಇದ್ದಾಗ ಮೈಸೂರಿಗೆ ಕರೆಸಿ ಅವರ ಮನ ಒಲಿಸೋ ಪ್ರಯತ್ನವನ್ನು ದರ್ಶನ್ ಮಾಡಿದ್ದರು. ಹೀಗಾಗಿ, ಕೊಲೆ ಆರೋಪಿ ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್ನನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಸ್ಲಿಮರು, ಯಾದವರಿಗಾಗಿ ಯಾವ ಕೆಲಸ ಮಾಡಲ್ಲ, ಅವರು ನನಗೆ ಮತ ಹಾಕಿಲ್ಲ: ಜೆಡಿಯು ಸಂಸದ
ದರ್ಶನ್ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಸೇರಿದಂತೆ ಹಲವೆಡೆ ಸ್ಥಳ ಮಹಜರು ಮಾಡೋ ಸಾಧ್ಯತೆ ಇದೆ. ವಿಚಾರಣೆ ದೃಷ್ಟಿಯಲ್ಲಿ ಇದು ತುಂಬಾನೇ ಮುಖ್ಯ ಆಗಲಿದೆ. ದರ್ಶನ್ ಮೈಸೂರಿನಲ್ಲಿ ಏನು ಮಾಡಿದರು, ಕೊಲೆಗೆ ಸಂಬಂಧಿಸಿ ಅವರು ಹೋಟೆಲ್‌ನಲ್ಲಿ ಚರ್ಚೆ ಮಾಡಿದ್ದರೇ ಎನ್ನುವ ಕುರಿತು ತನಿಖೆ ನಡೆಯಲಿದೆ.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರೈಲು ಅಪಘಾತ- ಕೇಂದ್ರ ಸರ್ಕಾರವನ್ನು ಟೀಕಿಸಿದ ಖರ್ಗೆ

