ಬೆಂಗಳೂರು : ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಇದೇ ವೇಳೆ ಇಬ್ಬರ ಅರ್ಜಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್ ಆದೇಶಿಸಿದೆ.ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯ ದರ್ಶನ್ ಪರ ವಕೀಲರು ವಾದ ಮಂಡಿಸಲು ಸಮಯ ಅವಕಾಶ ಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಇದನ್ನು ಮನ್ನಿಸಿದ ನ್ಯಾಯಾಲಯ ಮುಂದಿನ ಅರ್ಜಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತು. ಇದರಿಂದಾಗಿ ದರ್ಶನ್ ಅಲ್ಲಿಯವರೆಗೂ ಬಳ್ಳಾರಿ ಜೈಲೇ ಗಟ್ಟಿ.ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ತನಿಖೆ ಮುಗಿದ ಹಿನ್ನಲೆಯಲ್ಲಿ ತಮಗೆ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಮೇಲನವಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗಾಗಲೇ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಸನ್ನ ಅವರು, ಆಕ್ಷೇಪಣೆ ಸಲ್ಲಿಸಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ನಾಗೇಶ್ ಪರ ವಕೀಲರು ವಾದ ಮಂಡಿಸಿದ ನಂತರ ನ್ಯಾಯಾಲಯ ನೀಡುವ ತೀರ್ಪು ದರ್ಶನ್ ಜಾಮೀನು ಭವಿಷ್ಯವನ್ನು ನಿರ್ಧರಿಸುತ್ತದೆ.
ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆ ವಿಚಾರಣೆ ಮುಂದೂಡಿದ್ದು, ದರ್ಶನ್ ಗೆ ಸದ್ಯಕ್ಕೆ ಬೇಲ್ ಸಿಗೋದು ಕಷ್ಟ-ಕಷ್ಟ ಎನ್ನಲಾಗ್ತಿದೆ. ದರ್ಶನ್ ಹೇಳಿಕೆ ಆಧರಿಸಿ ಸಾಕ್ಷ್ಯ ಸಂಗ್ರಹಿಸಿದ್ದಾಗಿ ಹೇಳಲಾಗಿದೆ. ಆದ್ರೆ ಸಾಕ್ಷ್ಯ ಗಮನಿಸಿದ್ರೆ ಪ್ರಾಸಿಕ್ಯೂಷನ್ ಆರೋಪಗಳು ಸುಳ್ಳು ಎಂದು ಅನಿಸುತ್ತದೆ. ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಕೆಲಸವಾಗಿರುವುದು ಕಂಡುಬರುತ್ತಿದೆ ಎಂದು ದರ್ಶನ್ ಪರ ವಕೀಲರ ವಾದ ಮಂಡಿಸಿದ್ದಾರೆ.