ಬೆಂಗಳೂರು: ದೊಡ್ಮನೆ ವಂಶದ ಮೂರನೇ ತಲೆಮಾರು, ಮೊದಲ ಸಿನಿಮಾ ಮೂಲಕವೇ ಯುವಸಮೂಹದ ಮನೆಗೆದ್ದಿರುವ ನಟ ಯುವ ರಾಜಕುಮಾರ್ ನಟನೆಯ ಮುಂದಿನ ಸಿನಿಮಾ ಎಕ್ಕ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದು ಸಿನಿಮಾ ಬಿಡುಗಡೆಗೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿದೆ.
ಇದೇ ಜುಲೈ 18 ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದ್ದು, ಯುವ ಅಭಿನಯದ ಎರಡನೇ ಸಿನಿಮಾಗೆ ದೊಡ್ಡ ಎಕ್ಸ್ಪೆಕ್ಟೇಷನ್ ಕ್ರಿಯೇಟ್ ಆಗಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿ ಇರುವಂತೆ ಯುವರಾಜ್ ಕುಮಾರ ಮತ್ತು ಚಿತ್ರತಂಡ ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ನಟ ಯುವ ಸಿಎಂ ಸಿದ್ದರಾಮಯ್ಯ ಅವರೊಟ್ಟಿಗೆ ಕೆಲಕಾಲ ಮಾತುಕತೆ ನಡೆಸಿದ್ದು ತಮ್ಮ ಎಕ್ಕ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಜುಲೈ 18 ರಂದು ತೆರೆ ಕಾಣಲಿರುವ ಯುವ ನಟನೆಯ “ಎಕ್ಕ” ಸಿನಿಮಾ ಯಶಸ್ಸಾಗಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

