ಬೆಂಗಳೂರು: ನಟಿ ಅಮೂಲ್ಯ (Amulya) ಮಾವ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಾಮಚಂದ್ರ (Ramachandra) ಅವರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದಾರೆ.
30ಕ್ಕೂ ಹೆಚ್ಚು ಅಧಿಕಾರಿಗಳು 10 ವಾಹನಗಳಲ್ಲಿ ಬಂದು ಆರ್‌ಆರ್ ನಗರದಲ್ಲಿರುವ ನಿವಾಸದ ಮನೆ ಮೇಲೆ ದಾಳಿ ಮಾಡಿದ್ದಾರೆ. ರಾತ್ರಿ ಸುಮಾರು 1ಒ ಗಂಟೆ ವೇಳೆ ದಾಳಿ ಮಾಡಿ 31 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹರ್ಷಿಕಾ-ಭುವನ್ ಹಲ್ಲೆ ಪ್ರಕರಣ – ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿದ ದಂಪತಿ
ಮಾಧ್ಯಮಗಲೀಗೆ ಪ್ರತಿಕ್ರಿಯಿಸಿದ ರಾಮಚಂದ್ರ, ಅಧಿಕಾರವನ್ನು ದುರುಪಯೊಗ ಪಡಸಿಸಿಕೊಂಡು ಮನೆ ಮೆಲೆ ದಾಳಿ ಮಾಡಿಸಿದ್ದರೆ. ಕಾಂಗ್ರೆಸ್ ಈ ಭಾಗದಲ್ಲಿ ಹಣವನ್ನು ಹಂಚಿಕೆ ಮಾಡುತ್ತಿತದತು. ಅದಕ್ಕೆ ನಾವು ಅಡಿ ಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಹೊಸ ಉದ್ಯಮದತ್ತ ಅಶ್ವಿನಿ
ರಾಮಚಂದ್ರರರ ಆರೋಪವೇನು?
ದಾಳಿ ವೇಳೆ ಆರ್‌ಓಗೆ ಪದೇ ಪದೇ ಪೋನ್ ಬರುತಿತ್ತು. ಫೋನ್‌ನಲ್ಲಿ ಇದ್ದ ವ್ಯಕ್ತಿ ಅವರನ್ನು ಎರಡು ದಿನ ಒಳಗಡೆ ಹಾಕಿಸಿ ಎಂದು ಹೇಳುತ್ತಿದ್ದರು. ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಮದ್ಯ ತರಿಸಿದ್ದೆ. ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ಸುಮ್ಮನೆ ಆಗಿದ್ದೆವು. ಈ ಭಾಗದಲ್ಲಿ ಬ9ಇಜೆಪಿಗೆ 18 ಸಾವಿರ ಮುನ್ನಡೆ ಬರುತ್ತದೆ. ಇದನ್ನು ಸಹಿಸಲಾಗದೇ ಅಧೀಕಾರ ದುರ್ಬಳಕೆ ಮಾಡಿದ್ದಾರೆ ಎಂದು ರಾಮಚಂದ್ರ ಆರೋಪಿಸಿದ್ದಾರೆ. ಇದನ್ನೂ ಓದಿ: ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾಥಿಗಳನ್ನು ಮೇಲೆ ಹಲ್ಲೆ

