ಬೆಂಗಳೂರು : ನಟಿ ತಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ರಾಜ್ಯಪ್ರಶಸ್ತಿಗೆ ಇತ್ತೀಚೆಗೆ ನಿಧನರಾದ ಬಿ ಸರೋಜಾದೇವಿ ಅವರ ಹೆಸರನ್ನು ಇಡಲು ಮನವಿ ಮಾಡಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತರಾದ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ಬಿ.ಸರೋಜಾ ದೇವಿ ಸದ್ಯ ನೆನಪು ಮಾತ್ರ. ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೊಬ್ಬರಾಗಿ ಗುರುತಿಸಿಕೊಂಡ ಇವರು ಇದೇ ಜುಲೈ 14ರ ಮುಂಜಾನೆ ಕೊನೆಯುಸಿರೆಳೆದರು. ಇದೀಗ, ಬಿ. ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಬೇಕೆಂದು ಮನವಿ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿಯಾದ ತಾರಾ: ಇಂದು ಹಿರಿಯ ನಟಿ, ಬಿಜೆಪಿ ಮುಖಂಡರಾದ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಈಗಾಗಲೇ ಚಿತ್ರರಂಗದಲ್ಲಿ ಸಾಧನೆ ಮಾಡಿದ ಹಲವರ ಹೆಸರನ್ನು ರಾಜ್ಯ ಪ್ರಶಸ್ತಿಗೆ ಇಟ್ಟಿದೆ ಸರ್ಕಾರ, ಜಯಂತಿ ಅವರ ಹೆಸರನ್ನು ಕೂಡ ಇತ್ತಿಚ್ಚಿಗೆ ಪ್ರಶಸ್ತಿಗೆ ಇಟ್ಟಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ ತಾರ ಮನವಿ ಮಾಡಿದ್ದಾರೆ.

