ಕುಣಿಗಲ್: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 24 ರಂದು ಒಂದು ಐತಿಹಾಸಿಕ ತೀರ್ಪನ್ನು ಕೊಟ್ಟಿದ್ದು ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳೇ ಜಾರಿ ಮಾಡಬಹುದು ಎಂದು ಐತಿಹಾಸಿಕ ತೀರ್ಪನ್ನು ಕೊಟ್ಟಿದ್ದಾರೆ, ಎಂದು ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ವಿ ಶಿವಶಂಕರ್ ,ಅವರು ತಿಳಿಸಿದರು,,
ಕಳೆದ 30 ,32 ವರ್ಷಗಳಿಂದ ನಾವು ಸತತವಾಗಿ ಒಳ ಮೀಸಲಾತಿ ಕುರಿತು ಚಳುವಳಿಯನ್ನು ಮಾಡಿಕೊಂಡು ಬಂದಿದ್ದೇವೆ , ಈಗಾಗಲೇ ಸದಾಶಿವ ಆಯೋಗ ಆಯ್ತು, ನಾಗಮೋಹನ್ ದಾಸ್ ಆಯೋಗ ರಾಜ್ಯ ಸರ್ಕಾರಕ್ಕೆ ಒಂದು ಮಧ್ಯಂತರ ತೀರ್ಪನ್ನು ಕೊಟ್ಟಿದೆ ಎಂದರು, ನಮ್ಮ ಮಾದಿಗ ಬಂಧುಗಳಿಗೆ ತಿಳಿಸುವುದೇನೆಂದರೆ ಈ ತಿಂಗಳ ಅಂದರೆ ಏಪ್ರಿಲ್ ತಿಂಗಳಲ್ಲಿ ಜನಗಣತಿಯವರು ನಿಮ್ಮ ಮನೆ ಹತ್ತಿರ ಬಂದರೆ ಪ್ರತಿಯೊಬ್ಬರೂ ಸಹ ಅವರ ಜಾತಿ ” ಮಾದಿಗ “ಎಂದೇ ಬರೆಸಬೇಕು ಎಂದು ತಿಳಿಸಿದರು,,
ಈ ಪೂರ್ವಭಾವಿ ಸಭೆಯಾಗಿ ಇದೇ 06.04.2025 ರಂದು ಬೆಳಿಗ್ಗೆ 10:00 ಗಂಟೆಗೆ ಕುಣಿಗಲ್ ಪಟ್ಟಣದ ಗೌತಮಪ್ರೌಢ ಶಾಲೆಯಲ್ಲಿ ನಮ್ಮ ಸಮುದಾಯದ ಮುಖಂಡರು, ನಮ್ಮ ಜನಾಂಗದ ಹಿರಿಯರು, ಹಾಗೂ ವಿದ್ಯಾವಂತರು , ಎಲ್ಲರೂ ಸೇರಿ ಒಂದು ಪೂರ್ವಭಾವಿ ಸಭೆಯನ್ನು ಮಾಡಿ ಈ ಒಳ ಮೀಸಲಾತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಲ್ಲಾನನ್ನ ಮಾದಿಗ ಬಂಧುಗಳಲ್ಲಿ ಹಾಗೂ ಮಾಧ್ಯಮ ಮಿತ್ರರಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು,,
ವರದಿ ನರಸಿಂಹರಾಜು