ಶಿಮ್ಲಾ: ಮುಸ್ಲಿಂ ವ್ಯಾಪಾರಿಗಳು ಹಿಮಾಚಲ ಪ್ರದೇಶದ ಸೇಬು ಹಣ್ಣುಗಳನ್ನು ಬಹಿಷ್ಕರಿಸಬೇಕು ಎಂದು ಎಐಎಂಐಎಂ ಪಕ್ಷದ ನಾಯಕ ಶೊಯೇಬ್ ಜಮಾಯಿ ಕರೆ ನೀಡಿದ್ದಾರೆ. ಶಿಮ್ಲಾದ ಸಂಜೌಲಿ ಮಸೀ ದಿಯನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶ ಇರುವುದರಿಂದ ಕಳೆದ ವಾರ ವಿಡಿಯೊ ಭಾಷಣ ಮಾಡಿದ್ದ ಶೊಯೇಬ್ ಜಮಾಯಿ ಪ್ರಚೋ ದನಕಾರಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಅವರು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡುವಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶೊಯೇ ಬ್ ಜಮಾಯಿ ಪೋಸ್ಟ್ಗೆ ತೀವ್ರ ವಿರೋಧ ವ್ಯಕ್ತವಾದ ನಂತರ ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿರುವ ಅವರು, ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈ ಸಲಾಗಿದೆ. ನಾನು ಯಾವುದೇ ಸಮಾಜವನ್ನು ದ್ವೇಷಿಸುವುದಿಲ್ಲ. ಇಡೀ ಭಾರತ ಒಂದೇ ಎಂದು ಹೇಳಿದ್ದಾರೆ.
ಶೊಯೇಬ್ ಜಮಾಯಿ ಹೇಳಿಕೆ ಖಂಡಿಸಿರುವ ಹಿಮಾಚಲ ಪ್ರದೇಶ ಬಿಜೆಪಿ ಘಟಕ, ದ್ವೇಷ ಭಾಷಣಮಾಡುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂ ತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಒತ್ತಾಯಿಸಿದ್ದಾರೆ.

