ರಾಜ್ಯದ ಎಲ್ಲ ವಿದ್ಯುತ್ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್ ಮಾಡಲಾಗುವುದು ಎಂದು ಇದೀಗ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಕೆಲವು ಮೀಟರ್‌ಗಳನ್ನು ಮಾತ್ರ ಸ್ಮಾರ್ಟ್ಮೀಟರ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್ ಮಾಡಲಾಗುವುದು. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದ್ದು, ಇನ್ಮುಂದೆ ಮೊಬೈಲ್ ರೀಚಾರ್ಜ್ ರೀತಿ ಮೀಟರ್ ರೀಚಾರ್ಜ್ ಮಾಡಬಹುದಾಗಿದೆ ಎಂದಿದ್ದಾರೆ.
ಪರಿಷ್ಕೃತ ವಿತರಣಾ ವಲಯ ಯೋಜನೆ (RDSS)ಗೆ ಕೇಂದ್ರ ಸರ್ಕಾರ ಒಪ್ಪಿದ್ದು, ನಮ್ಮ ಸಂಪುಟವೂ ಒಪ್ಪಿದರೇ RDSS ಸ್ಕೀಮ್ ಜಾರಿ ಮಾಡುತ್ತೇವೆ. ಹೊಸ ಸ್ಮಾರ್ಟ್ ಮೀಟರ್ಗೆ ಸಿಮ್ ರೀತಿ ಅಳವಡಿಸಲಾಗಿದೆ. ಒಂದು ಸ್ಮಾರ್ಟ್ ಮೀಟರ್ ನ ಬೆಲೆ ಐದು ಸಾವಿರ ರೂಪಾಯಿ ಆಗಿರುತ್ತದೆ.ಹಾಗೂ ಹಳೇ ಮೀಟರ್ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಗೂ ಈ ಮೀಟರ್ ಗಳಲ್ಲಿ ಗ್ರಾಹಕರು ಪ್ರೀಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಆನ್‌ಲೈನ್ ಮೂಲಕ ಅಥವಾ ಸಮೀಪದ ವಿದ್ಯುತ್ ವಿತರಣಾ ಕಚೇರಿಗಳಲ್ಲಿ ರೀಚಾರ್ಜ್ ಮಾಡಿಸಿ ತಮಗೆ ಬೇಕಾದಷ್ಟು ಯೂನಿಟ್‌ಗಳನ್ನು ಪಡೆಯಬಹುದಾಗಿದೆ.

