ಬೆಂಗಳೂರು : ಲಾಲ್ ಬಾಗ್ 21ನೇ ಫಲ ಪುಷ್ಪ ಪ್ರದರ್ಶನಕ್ಕೆ ಬಾರಿ ರೆಸ್ಪಾಸ್ ಸಿಕ್ಕಿದ್ದು, ಕಳೆದ 11 ದಿನಗಳಿಂದ ನಡೆಯುತ್ತಿದ್ದ ಪ್ರದರ್ಶನಕ್ಕೆ ಜನಸಾಗರ ಹರಿದು ಬಂದಿದೆ. ಜೊತೆಗೆ ಕೋಟಿ ಕೋಟಿ ಆದಾಯ ಕೂಡ ಸಂಗ್ರಹವಾಗಿದೆ.
ಕಳೆದ 11 ದಿನಗಳಲ್ಲಿ 8ಲಕ್ಷಕ್ಕೂ ಹೆಚ್ಚು ಮಂದಿ ಪ್ಲವರ್ ಶೋ ವೀಕ್ಷಣೆ ಮಾಡಿದ್ದು. ಆಗಸ್ಟ್ 8 ರಿಂದ ಇಲ್ಲಿಯವರೆಗೆ 8,41,789 ಮಂದಿ ಲಾಲ್‌ಬಾಗ್ ಭೇಟಿ ನೀಡಿದ್ದಾರೆ.
ಕಳೆದ 11 ದಿನಗಳಲ್ಲಿ 2 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದ್ದು. 11 ದಿನದಲ್ಲಿ 2 ಕೋಟಿಯ 84 ಲಕ್ಷದ 15 ಸಾವಿರ ರೂಪಾಯಿ ಸಂಗ್ರಹವಾಗಿದೆ.
ನಿನ್ನೆ ವಿಕೆಂಡ್ ಹಿನ್ನಲೆ ಲಾಲ್ ಬಾಗ್ ಗೆ ಜನ ಸಾಗರ ಹರಿದುಬಂದಿದ್ದು ನಿನ್ನೆ ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಮಂದಿ ಪ್ಲವರ್ ಷೋ ವೀಕ್ಷಣೆ ಮಾಡಿದ್ದಾರೆ.
ನಿನ್ನೆ ಒಂದೇ ದಿನ 39 ಲಕ್ಷದ 50 ಸಾವಿರ ಆದಾಯ ಸಂಗ್ರಹವಾಗಿದೆ. ಉತ್ತಮ ಪ್ರತಿಕ್ರಿಯೆಯೊಂದಿಗೆ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನಕ್ಕೆ ತೆರೆಬಿದ್ದಿದೆ.