ಆರೋಗ್ಯ ಇಲಾಖೆ ಸೂಚನೆ ಹೊರಡಿಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಈಗಿರುವಾಗಲೇ ಕೊರೊನಾಗೆ 63 ವರ್ಷದ ವೃದ್ಧರೊಬ್ಬರು ಜೀವ ಬಿಟ್ಟಿದ್ದು ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 58 ಹೊಸ ಕೊರೊನಾ ಪ್ರಕರಣಗಳು ದಾಖಲು ಆಗಿವೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 238ಕ್ಕೆ ಏರಿಕೆ ಯಾಗಿದ್ದು ಕಳೆದ 24 ಗಂಟೆಯಲ್ಲಿ ಕೊರೊನಾಗೆ 63 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇನ್ನೊಂದು ಒಳ್ಳೆ ಸುದ್ದಿ ಎಂದರೆ ಕಳೆದ 24 ಗಂಟೆಯಲ್ಲಿ 53 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಒಂದು ದಿನಕ್ಕೆ ಕೊರೊನಾ ಪಾಸಿಟಿವಿಟಿ ರೇಟ್ 13.8% ರಷ್ಟು ಇದೆ.ಕರ್ನಾಟಕ ಮಾತ್ರವಲ್ಲ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕತಣಗಳು ದಾಖಲು ಆಗಿವೆ. ಕೇರಳ ಒಂದರಲ್ಲೇ 1136 ಕೇಸ್ಗಳು ಪತ್ತೆ ಆಗಿವೆ.

