ಮುಂಬೈ: ವಿದ್ಯುತ್ ಬಿಲ್ (Electric Bill) ಅಧಿಕವಾಗಿದೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಗ್ರಾಹಕರೊಬ್ಬರು ಮಹಾವಿತರಣ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರನ್ನು ಹೊಡೆದು ಕೊಂದ ಘಟನೆ ಇತ್ತೀಚೆಗೆ ನಡೆದಿತ್ತು. ಆದರೆ ಇದೀಗ ಅದೇ ರೀತಿಯ ಘಟನೆ ಮುಂಬೈನಲ್ಲೂ ನಡೆದಿದೆ. ವಿದ್ಯುತ್ ಬಿಲ್ ವಿವಾದದಿಂದ ವ್ಯಕ್ತಿಯೊಬ್ಬ ತನ್ನ ಸ್ವಂತ ಮಾಲೀಕನನ್ನು ಕೊಂದಿರುವ ಘಟನೆ ಗೋವಂಡಿಯಲ್ಲಿ ನಡೆದಿದೆ.
ಗಣಪತಿ ಝಾ (49) ಮೃತ ವ್ಯಕ್ತಿ. ಏಪ್ರಿಲ್ 30ರಂದು ಗಣಪತಿ ಮತ್ತು ಮನೆಯ ಬಾಡಿಗೆದಾರ ಆರೋಪಿ ಅಬ್ದುಲ್ ನಡುವೆ ಜಗಳವಾಗಿತ್ತು. ಹೆಚ್ಚುತ್ತಿರುವ ವಿದ್ಯುತ್ ಬಿಲ್ ವಿಚಾರವಾಗಿ ಇಬ್ಬರೂ ಜಗಳವಾಡಿದ್ದರು. ಈ ಜಗಳದ ವೇಳೆ ಗಣಪತಿ ಅಬ್ದುಲ್ನನ್ನು ನಿಂದಿಸಿದ್ದರು. ಇದರಿಂದ ಇನಷ್ಟು ಕೋಪಗೊಂಡ ಅಬ್ದುಲ್ ಶೇಖ್ ಮರದ ಕೋಲಿನಿಂದ ಗಣಪತಿಗೆ ಥಳಿಸಿದ್ದಾನೆ.
ಆಗ ಗಣಪತಿಯು ತನ್ನನ್ನು ರಕ್ಷಿಸಿಕೊಳ್ಳಲು ಆತನ ವಿರುದ್ಧವೂ ಹಲ್ಲೆ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಆರೋಪಿ ಅಬ್ದುಲ್ ಗಣಪತಿಯ ಮುಖಕ್ಕೆ ಸುತ್ತಿಗೆಯಿಂದ ಹೊಡೆದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಹಿಳೆ ಕಿಡ್ನಾಪ್ ಕೇಸ್- ಎ2 ಆರೋಪಿ ಸತೀಶ್ ಬಾಬು 8 ದಿನ SIT ಕಸ್ಟಡಿಗೆ
ಕೊನೆಗೆ ಗಾಯಗೊಂಡಿದ್ದ ಗಣಪತಿಯನ್ನು ಅಬ್ದುಲ್ ಶೇಖ್ ಹಾಗೇ ಬಿಟ್ಟು ಹೊರಟು ಹೋಗಿದ್ದ. ಗಣಪತಿ ಅವರು ತೀವ್ರವಾಗಿ ಗಾಯಗೊಂಡು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೆಆರ್ ನಗರದ ಸಂತ್ರಸ್ತೆ ನನಗೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್
ನಂತರ ಬಂಗನವಾಡಿಯ ಗಣಪತಿ ಅವರ ನಿವಾಸದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯೊಳಗೆ ಗಣಪತಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಬಿದ್ದಿತ್ತು. ಇದನ್ನೂ ಓದಿ: ಕೆಂಪೇಗೌಡ ರಸ್ತೆಯಲ್ಲಿರುವ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್
ಆರೋಪಿಯನ್ನು ಶಿವಾಜಿ ನಗರ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ “ಕೈ” ಕಾರ್ಯಕತೆಯರು ಅಗ್ರಹಿಸಿ ಪ್ರತಿಭಟನೆ