ನವದೆಹಲಿ: ಲೋಕಸಭಾ ಚುನಾವಣೆಯ(lokasabha Election) ಹೊತ್ತಲ್ಲಿಯೇ ಕಾಂಗ್ರೆಸ್ (Congress) ಪಕ್ಷಕ್ಕೆ ಒಬ್ಬೊಬ್ಬರೇ ರಾಜೀನಾಮೆ ನೀಡುತ್ತಿದ್ದು, ಇದೀಗ ಮತ್ತಿಬ್ಬರು ಈ ಸಾಲಿಗೆ ಸೇಪರ್ಡೆಗೊಂಡಿದ್ದಾರೆ.
ಮಾಜಿ ಶಾಸಕರಾದ ನೀರಜ್ ಬಸೋಯಾ (Neeraj Basoya) ಮತ್ತು ನಸೀಬ್ ಸಿಂಗ್ (Naseeb Singh) ಪಕ್ಷಕ್ಕೆ ಗೂಡ್ ಬೈ ಹೇಳಿದ್ದಾರೆ. ಆಪ್ (AAP) ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಆಪ್ ನಾಯಕರು ಜೈಲಿನಲ್ಲಿದ್ದಾರೆ. ಹೀಗಾಗಿ ಆಪ್ ಜೊತೆಗೆ ಮೈತ್ರಿ ಸರಿಯಾದ ನಿರ್ಧಾರ ಅಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತಿಚೆಗೆ ದೆಹಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಸಿಂಗ್ ಲವ್ಲಿ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ; ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ- ಜಿ. ಪರಮೇಶ್ವರ್
ಇತ್ತ ಮಧ್ಯಪ್ರದೇಶದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಮ್ನಿವಾಸ್ ರಾವತ್ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ. ರಾವತ್ ಅವರು ದಿಗ್ವಿಜಯ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಈ ಹಿಂದೆ ಸಂಸದ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿದ್ದರು. ಸಂಸದ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿರುವಾಗಲೇ ರಾವತ್ ಪಕ್ಷಾಂತರ ನಡೆದಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಪತಿಯ ಜೊತೆ ಹೋಗುತ್ತಿದ್ದ ಮಹಿಳೆಗೆ ಪುಂಡರಿಂದ ಲೈಂಗಿಕ ಕಿರುಕುಳ