ಬೆಂಗಳೂರು : ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದ ಕನ್ನಡಿಗ, ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ವಿನಾಕಾರಣ ಅಮೇರಿಕಾ ವೀಸಾ ನಿರಾಕರಿಸಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅವರು, ಅಕ್ಕ ಸಮ್ಮೇಳನ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು 20 ದಿನ ಅಮೆರಿಕ ಪ್ರವಾಸಕ್ಕೆ ಹೋಗಬೇಕಿತ್ತು, ಅಮೆರಿಕಾಗೆ ಹೋಗಲು ಎರಡು ತಿಂಗಳ ಹಿಂದೆಯೇ ವೀಸಾಗೆ ಅರ್ಜಿ ಸಲ್ಲಿಸಿದ್ದರು.ಆದರೆ ಅಮೆರಿಕ ಯಾವುದೇ ಕಾರಣ ನೀಡದೆ ಅವರ ವೀಸಾ ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ 30 ರಿಂದ ಸಪ್ಟೆಂಬರ್ 1 ರವರೆಗೂ ಮೂರು ದಿನ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಅರುಣ್ ಯೋಗಿರಾಜ್ ಅಮೆರಿಕಕ್ಕೆ ತೆರಳಬೇಕಿತ್ತು. ಈಗ ವೀಸಾ ನಿರಾಕರಣೆಯಿಂದ ಬೇಸರ ಮೂಡಿಸಿದೆ.
ಅಮೇರಿಕದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆ.30 ರಿಂದ ಸೆ. 1ರವರೆಗೆ ಅಕ್ಕ ಸಮ್ಮೇಳನ ಆಯೋಜಿಸಲಾಗಿದೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಮಂದಿರದಲ್ಲಿನ ಬಾಲರಾಮನ ವಿಗ್ರಹವನ್ನು ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದರು. ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿನೆ ಮಾಡಿದ ಬಳಿಕ ಅರುಣ್ ಯೋಗಿರಾಜ್ ಬಳಿಕ ದೇಶ, ವಿದೇಶದಲ್ಲಿ ಪ್ರಖ್ಯಾತಿ ಪಡೆದಿದ್ದರು.