ಬೆಂಗಳೂರು: ವ್ಯಕ್ರಿಯೆ ಮೇಲೆ ನಡು ರಸ್ತೆಯಲ್ಲಿ ಅಟ್ಟಾಡಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ..ಹಣಕ್ಕಾಗಿ ನಡು ರೋಡಲ್ಲಿ ಶೋಯಬ್ ಎಂಬಾತನ ಮೇಲೆ ಅಟ್ಯಾಕ್ ಮಾಡಿದ್ದು, ಹತ್ತಾರು ಬಾರಿ ಉಲ್ಟಾ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಆರೋ ಪದ ಮೇರೆಗೆ ಆರು ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.ಮೂವರು ತಲೆಮರೆಸಿಕೊಂಡಿದ್ದಾರೆ.
ಹಣದ ವಿಚಾರಕ್ಕೆ ಸ್ನೇಹಿತರಿಬ್ಬರ ಮಧ್ಯೆ ನಡೆದ ಗಲಾಟೆಯಲ್ಲಿ ಶೋಯಬ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ
ಯತ್ನಿಸಿದ್ದಾರೆ. ಲಿಂಗರಾಜಪುರದ ನಿವಾಸಿಗಳಾದ ನಫೀಸ್, ನಿಸಾರ್ ಪಾಷ, ಮನ್ಸೂರ್, ಫಿರೋಜ್ ಪಾಷ, ಮೆಹಬೂಬ್, ರಜಾಕ್ ಎಂಬುವವರನ್ನು
ಬಂಧಿಸಲಾಗಿದೆ.
ದಾವೂದ್ ಮತ್ತು ಶೋಯೆಬ್ ಕಾಲೇ ಜು ಸಹಪಾಠಿಗಳು. ದಾವೂದ್ ಚಹಾ ಅಂ ಗಡಿ ಇಟ್ಟುಕೊಂಡಿದ್ದರು. ನಿರುದ್ಯೋ ಗಿಯಾಗಿದ್ದ ಶೋ ಯಬ್,
ದಾವೂದ್ನಿಂದ ರೂ. 1.7 ಲಕ್ಷ ಹಣ ಪಡೆದಿದ್ದ. ಹಣ ವಾಪಸ್ ನೀ ಡುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇ ಳೆ ದಾವೂದ್,
ಶೋ ಯಬ್ಗೆ ಮಚ್ಚಿನಿಂ ದ ಹಲ್ಲೆ ನಡೆಸಿದ್ದಾನೆ.
ಆರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವಮೂವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

