ಪಾಕಿಸ್ತಾನದ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ, 8 ಪಾಕ್‌ ಸೈನಿಕರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಬನ್ನು ಕಂಟೋನ್ಮೆಂಟ್‌ನಲ್ಲಿರುವ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿಗೆ 8 ಮಂದಿ ಪಾಕಿಸ್ತಾನಿ ಸೈನಿಕರು ಬಲಿಯಾಗಿದ್ದಾರೆ. ಆತ್ಮಾಹುತಿ ಬಾಂಬರ್‌ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೇನಾ ನೆಲೆಯಲ್ಲಿ ಸುತ್ತುವರಿದ ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದರು. ಪರಿಣಾಮ 8 ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಏಳು ಮಂದಿ ಸೈನಿಕರು ಮತ್ತು ಒಬ್ಬ ಅರೆಸೇನಾ ಯೋಧ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ 10 ಆಕ್ರಮಣಕಾರರನ್ನು ಸೈನಿಕರು ಕೊಂದಿದ್ದಾರೆ ಎಂದು ಮಿಲಿಟರಿ ಹೇಳಿದೆ. … Continue reading ಪಾಕಿಸ್ತಾನದ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ, 8 ಪಾಕ್‌ ಸೈನಿಕರ ಸಾವು