ಚಿಕ್ಕೋಡಿ / ಅಥಣಿ, ಫೆ.19: ಅಥಣಿಯಲ್ಲಿ ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕರೊಬ್ಬರ ಕೃತ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಪಾಲಕರಿಂದ ತಪ್ಪಿಸಿಕೊಂಡಿದ್ದ ಬುದ್ದಿಮಾಂದ್ಯ ಚಿಕ್ಕ ಬಾಲಕನನ್ನು ಆಟೋ ರಿಕ್ಷಾ ಚಾಲಕರು ಸುರಕ್ಷಿತವಾಗಿ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಅಥಣಿಯ ಪಾಸಿಕಟ್ಟಿ ಹತ್ತಿರದ ನಿವಾಸಿಯಾಗಿರುವ ಬಾಲಕನು ಮನೆಯವರ ಗಮನ ತಪ್ಪಿಸಿ ಹೊರಗೆ ಬಂದಿದ್ದಾನೆ. ರಸ್ತೆ ಬದಿಯಲ್ಲಿ ಅಲೆದಾಡುತ್ತಿದ್ದ ಬಾಲಕನನ್ನು ಗಮನಿಸಿದ ಆಟೋ ಚಾಲಕರು ತಕ್ಷಣ ಮಾನವೀಯತೆ ತೋರಿಸಿ ಬಾಲಕನನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದುಕೊಂಡರು.
ನಂತರ ಬಾಲಕನನ್ನು ಅಥಣಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದರು. ಪೊಲೀಸರು ಬಾಲಕನ ಕುರಿತು ಮಾಹಿತಿ ಕಲೆಹಾಕಿ, ಪಾಲಕರನ್ನು ಸಂಪರ್ಕಿಸಿ ಬಾಲಕನನ್ನು ಸುರಕ್ಷಿತವಾಗಿ ಅವರ ವಶಕ್ಕೆ ಒಪ್ಪಿಸಿದರು.
ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕರ ಮಾನವೀಯ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಕಲ್ಲಪ್ಪಾ ಮಾಳಾಜ, ಸಂಪೂರ್ಣ ನ್ಯೂಸ್, ಚಿಕ್ಕೋಡಿ

