ಬೆಂಗಳೂರು : ಇದೇನ್ ಕರ್ಮ ನೋಡಿ.. ಒಂದಾದ್ಮೆಲೆ ಒಂದು ದರದ ಬರೆ ಬೀಳ್ತಾನೆ ಇದೆ.. ಸರ್ಕಾರ ನಮ್ಮನ್ನ ಕೋಟ್ಯಾಧೀಶರು ಅನ್ಕೊಂಡಿದ್ದಾರೋ ಏನೋ ಗೊತ್ತಿಲ್ಲ.. ತಿಂಗಳು ಕಳೆಯಂಗಿಲ್ಲ.. ಬೆಲೆ ಏರಿಸೋದು.. ಬಡವರ ಹೊಟ್ಟೆ ಮೇಲೆ ಹೊಡೆಯೋದು.. ಹಂಗೋ ಇಂಗೊ ಆಟೋದಲ್ಲಿ ಆದ್ರೂ ಓಡಾಡೋಣ ಅಂದ್ರೆ ಈಗ ಅದಕ್ಕೂ ಕಲ್ಲಾಕಿದ್ದಾರೆ.. ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಹೆಚ್ಚಿಸಿ ಜೇಬಿಗೆ ಕತ್ತರಿ ಹಾಕಿದ್ದಾರೆ..
ಮಿನಿಮಮ್ ದರ 30ರಿಂದ 36 ರೂಗೆ ಏರಿಕೆ ಮಾಡಿ ನಂತರ ಪ್ರತಿ KMಗೆ 18 ರೂಪಾಯಿ ನಿಗದಿ ಮಾಡಿದ್ದಾರೆ.. ಅಲ್ಲದೆ ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತ.. ಆದ್ರೆ 5 ನಿಮಿಷಗಳ ನಂತರ ಪ್ರತಿ 15 ನಿಮಿಷಕ್ಕೆ 10 ರೂಪಾಯಿ ಹೆಚ್ಚಿಸಿ ಸಿಟಿ ಮಂದಿಗೆ ಸರ್ಕಾರ ಶಾಕ್ ಕೊಟ್ಟಿದೆ..

