ಫ್ಲೋರಿಡಾ: ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ಮುಂದೂಡಲಾಗಿದೆ. ಹವಾಮಾನ ವೈಪರೀತ್ಯ ರೀತಿಯ ಹಿನ್ನೆಲೆಯಲ್ಲಿ ರಾಕೆಟ್ ಉಡಾವಣೆಯನ್ನು ಮುಂದೂಡಲಾಗಿದೆ.
ಜೂನ್ 11ರಂದು ಸಂಜೆ 5:30ಕ್ಕೆ ರಾಕೆಟ್ ಉಡಾವಣೆಯಾಗಲಿದೆ. ನಾಳೆ ಅಮೆರಿಕದ ಫ್ಲೋರಿಡಾದ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಬೇಕಿತ್ತು.
ಭಾರತೀಯ ಶುಭಾಂಶು ಶುಕ್ಲಾ ಸೇರಿ ನಾಲ್ವರು ಯಾತ್ರಿಗಳನ್ನೊಳಗೊಂಡ ರಾಕೆಟ್ ನಾಳೆ ಅಮೆರಿಕದಿಂದ ಉಡಾವಣೆಯಾಗಬೇಕಿತ್ತು. ಭಾರತೀಯ ಕಾಲಮಾನ ಪ್ರಕಾರ ನಾಳೆ ಸಂಜೆ 5.52ಕ್ಕೆ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಬೇಕಿತ್ತು. ಅದನ್ನು ಜೂನ್ 11ಕ್ಕೆ ಮುಂದೂಡಲಾಗಿದೆ.
ಅಮೆರಿಕದ ಆಕ್ಸಿಯೋಮ್- 4 ಯೋಜನೆಯಡಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಾಗಿದೆ. ಅಂತರಿಕ್ಷ ಪ್ರವಾಸ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಅವರಾಗಿದ್ದಾರೆ. ಇದಕ್ಕೂ ಮೊದಲು ಭಾರತದ ರಾಕೇಶ್ ಶರ್ಮಾ ಅವರು ಅಂತರಿಕ್ಷಯಾನ ಪ್ರವಾಸ ಕೈಗೊಂಡಿದ್ದರು.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಬಹುನಿರೀಕ್ಷಿತ ಆಕ್ಸಿಯಮ್ -4 (ಆಕ್ಸ್ -4) ಕಾರ್ಯಾಚರಣೆಯ ಉಡಾವಣೆಯನ್ನು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಪ್ರಕಟಿಸಿದೆ.

