ಬೆಂಗಳೂರು: ಇತ್ತೀಚಿನ ದಿನಗಳಲ್ಲಿವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ತಮಿಳು ಚಿತ್ರದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ವ್ಯಕ್ತಿಯೋರ್ವ ನಟಿ, ಮಾಡೆಲ್ಗೆ ಮೋಸ ಮಾಡಿರುವ ಘಟನೆ ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.
ಬೆಂಗಳೂರು ಮೂಲದ ನಟಿ ಕಮ್ ಮಾಡಲ್ ನಂದಿತಾ ಶೆಟ್ಟಿ ಸಿನಿಮಾದಲ್ಲಿಆ್ಯಕ್ಟ್ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ವೇಳೆ
ಸಾಮಾಜಿಕ ಜಾಲತಾಣದಲ್ಲಿಮೂವೀ ಲಿಂಗ್ ಜಾಹೀರಾತು ಮೂಲಕ ಕ್ಯಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತನ
ಪರಿಚಯವಾಗಿದೆ. ಬಳಿಕ ತಾನು ರಾಘವ ಲಾರೆನ್ಸ್ ನಟನೆಯ ಹಂಟರ್ ಚಿತ್ರದ ಕ್ಯಾಸ್ಟಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿದ್ದು, ಆ್ಯಕ್ಟಿಂಗ್
ಚಾನ್ಸ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 1.71 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ.
ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ, ವಿದೇಶದಲ್ಲಿಶೂಟಿಂಗ್ ಇರುತ್ತೆಪಾಸ್ ಪೋರ್ಟ್, ಟಿಕೆಟ್ ಚಾರ್ಜ್ ಎಂದು ನಾನಾ
ಕಾರಣಗಳನ್ನು ನೀಡಿ ಸುರೇಶ್ ನಂದಿತಾಗೆ ವಂಚಿಸಿದ್ದಾನೆ. ವಂಚಕನ ಮಾತು ನಂಬಿ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ
ಪಾವತಿಸಿದ್ದನಂದಿತಾ, ಅನುಮಾನ ಬಂದು ಕ್ರಾಸ್ ಚೆಕ್ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಣನಕುಂಟೆ
ಪೊಲೀಸ್ ಠಾಣೆಯಲ್ಲಿದೂರು ನೀಡಿರುವ ನಂದಿನಿ ವಂಚಕನ ವಿರುದ್ಧಕಠಿಣ ಕ್ರಮ ಕೈಗೊಂಡಿದ್ದಾರೆ.

